ಸ್ಟುಡಿಯೋ ಬಂದ್~ಛಾಯಾಚಿತ್ರ ಗ್ರಾಹಕರ ಬದುಕಿಗೆ ಕರಿಛಾಯೆ-ಶ್ರೀಧರ ಶೆಟ್ಟಿಗಾರ್ ಕರಂದಾಡಿ

ಸ್ಟುಡಿಯೋಗಳು ಬಂದ್ ಆಗಿರುವ ಕಾರಣ  ಲಾಕ್ ಡೌನ್ ಛಾಯಾ ಚಿತ್ರಗ್ರಾಹಕರ ಮೇಲೆ ಕರಿ ಛಾಯೆ ಬೀರಿದೆ. ವೃತ್ತಿ ನಿರತರ ಮತ್ತು ಕುಟುಂಬ ಅವಲಂಬಿತರ ಮೇಲೆ ಇದು ದೊಡ್ಡ ಪರಿಣಾಮ ಬೀರಿದೆ.  ಅವಿಭಜಿತ ದ.ಕ, ಉಡುಪಿ ಜಿಲ್ಲೆಯಲ್ಲಿ 3826 ಸದಸ್ಯರು ನೋಂದಣಿ ಮಾಡಿ ಕೊಂಡಿರುವ ಸಂಘ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್. 

ಸ್ಟುಡಿಯೋಗಳಲ್ಲಿ ದುಭಾರಿ ವೆಚ್ಚದ ಸಾಧನಗಳಿವೆ. ಇನ್ವರ್ಟರ್, ಪ್ರಿಂಟರ್, ಸ್ಕ್ಯಾನರ್, ಸಿಸ್ಟಮ್ ಇತ್ಯಾದಿಗಳು ಧೀರ್ಘಾವಧಿ ಬಳಸದೇ ಇರುವುದರಿಂದ ಉಪಕರಣಗಳು ಕೆಟ್ಟು ಹೋಗುತ್ತಿವೆ, ಇದರಿಂದ ಲಕ್ಷಾಂತರ ರೂ ನಷ್ಟವಾಗಿದೆ ಎನ್ನುತ್ತಾರೆ ಸ್ಟುಡಿಯೋ ಮಾಲಕರು

ದಿನಕ್ಕೆ ಒಂದು ಬಾರಿ ಚಾಲುಗೊಳಿಸಿದರೆ ಲಕ್ಷಾಂತರ ಮೌಲ್ಯದ ಸೊತ್ತು ಉಳಿಸಿಕೊಳ್ಳಬಹುದು.  ದಿನದಲ್ಲಿ ಕೆಲ ಅವಧಿಗಾದರೂ ತೆರೆಯಲು ಅವಕಾಶ ನೀಡಬೇಕು ಎಂದು ಉಡುಪಿ, ದ.ಕ.ಜಿಲ್ಲೆಯ ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಸಿಯೇಶನ್ಸ್ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಕರಂದಾಡಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply