ನಾಗರಿಕ ಸೇವೆಯಲ್ಲಿ ಕಾನೂನು ಪದವೀಧರರಿಗೆ ವಿಪುಲ ಅವಕಾಶ- ಡಾ. ಸಂಜೀವ ಕುಮಾರ್

ಉಡುಪಿ: ಜೂನ್ 14ರಂದು ಭಾರತದಲ್ಲಿ ಸರ್ಕಾರವು ಅತಿದೊಡ್ಡ ಮತ್ತು ವೈವಿಧ್ಯಮಯ ಉದ್ಯೋಗದಾತನಾಗಿದ್ದು, ಸರ್ಕಾರಿ ಮತ್ತು ನಾಗರೀಕ ಸೇವಾ ಅಕಾಂಕ್ಷಿಗಳು ಅದರಲ್ಲಿಯೂ ಕಾನೂನು ಪಧವೀದರರು ನಾಗರಿಕ ಸೇವೆಗೆ ಸೇರಿ ತಮ್ಮ ಕಾನೂನು ಜ್ಞಾನದ ಮೂಲಕ ತಳಮಟ್ಟದಿಂದ ಹಿಡಿದು ನೀತಿ ನಿರೂಪಣೆ, ಕಾನೂನುಗಳ ಕರಡು ಮಸೂದೆ, ನೀತಿ ರಚನೆ, ಅಧೀನ ಕಾನೂನುಗಳ ರಚನೆ, ನಿಯಮ ಮತ್ತು ನಿಬಂಧನೆಗಳ ರಚನೆ ಮಾಡುವ ತನಕ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದಲ್ಲಿ ಗುರುತರವಾದ, ತೀವ್ರವಾದ ಬದಲಾವಣೆ ತರುವ ಸದಾವಕಾಶವಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸಂಜೀವ್ ಕುಮಾರ್ ಐ.ಎ.ಎಸ್ ಹೇಳಿದರು.

ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ “ಕಾನೂನು ಕ್ಷೇತ್ರದಲ್ಲಿ ವೃತ್ತಿ ಮಾರ್ಗದರ್ಶನ” ಎಂಬ ವಿಷಯದ ಒಂದು ವಾರದಅನ್‌ಲೈನ್ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ನಾಗರೀಕ ಸೇವಾ ಪರೀಕ್ಷೆಯ ವಿವಿಧ ಹಂತಗಳಾದ ಪ್ರಾಧಮಿಕ, ಮುಖ್ಯ ಹಾಗೂ ಮೌಖಿಕ ಪರೀಕ್ಷೆಯ ಹಾಗೂ ನಾಗರೀಕ ಸೇವಾ ಪರೀಕ್ಷೆಯಲ್ಲಿ ವಿಷಯಗಳ ಆಯ್ಕೆ ಮತ್ತು ತಯಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಮ್ಮಿಕೊಂಡಿರುವ 15 ರಿಂದ 21 ರ ವರೆಗಿನ ಈ ಏಳು ದಿನದ ಕಾರ್ಯಕ್ರಮದಲ್ಲಿ ಕಾನೂನು ಕ್ಷೇತ್ರದಲ್ಲಿನ ಉದಯೋನ್ಮುಖ ಅವಕಾಶಗಳು, ನ್ಯಾಯಂಗ ಸೇವಾ ಪರೀಕ್ಷೆಗೆ ತಯಾರಾಗುವಿಕೆ/ಸಜ್ಜಾಗುವಿಕೆ, ವೃತ್ತಿ ಆಯ್ಕೆಯಾಗಿ ವಕೀಲಿಕೆ, ಅಂತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾನೂನು ಪಧವೀಧರರಿಗೆ ಇರುವ ಅವಕಾಶಗಳು, ಕಾನೂನು ಸಂಸ್ಥೆಯ ಜೀವನ, ಕಂಪನಿ ಕಾರ್ಯದರ್ಶಿ – ಒಂದು ವೃತ್ತಿ ಆಯ್ಕೆ ಎಂಬ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡುವರು ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.

ಈ ಉದ್ಘಾಟನಾ ಸಮಾರಂಭವನ್ನು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.(ಡಾ.) ನಿರ್ಮಲ ಹರಿಕೃಷ್ಣ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಪರಿಚಯಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಶಂಕರಮೂರ್ತಿ ಬಿ.ಜಿ ರವರು ವಂದಿಸಿದರು.ಪ್ರೀತಿ ಹರೀಶ್ ರಾಜ್ ಒಂದು ವಾರದ ಕಾರ್ಯಕ್ರಮ/ ಕಾರ್ಯಗಾರದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾಥಿ೯ನಿ ಸ್ಮೃತಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply