ಬಾಲಿವುಡ್ ನಟಿ ರಾಖಿ ಸಾವಂತ್ ಹೊಸ ಬಾಯ್ ಫ್ರೆಂಡ್ ಮೈಸೂರಿನವ

ಫಿಲ್ಮಿ ಡೆಸ್ಕ್- ಬಾಲಿವುಡ್ ನಟಿ ರಾಖಿ ಸಾವಂತ್ ಸೀರಿಯಸ್ ಆಗಿ ಒಂದು ವಿಚಾರ ಹಂಚಿಕೊಂಡಿದ್ದಾರೆ. ನಾನು ಜೀವಕ್ಕಿಂತ ಹೆಚ್ಚಾಗಿ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಜೀವ ಇರುವ ತನಕ ಅವನು ನನ್ನ ಜೊತೆ ಇರುತ್ತಾನೆ ಅಂತ ಹೇಳಿದ್ದಾರೆ. ಅಂದ ಹಾಗೆ ರಾಖಿ ಸಾವಂತ್ ಹೊಸ ಬಾಯ್ ಫ್ರೆಂಡ್ ಮೈಸೂರಿನವರು. ಇವರ ಹೆಸರು ಅದಿಲ್ ಖಾನ್ ದುರಾನಿ.

ರಾಖಿ ಸಾವಂತ್ ಗೆ ಮದುವೆಯಾಗಿ ಡಿವೋರ್ಸ್ ಕೂಡ ಆಗಿದೆ. ತರುವಾಯ ರಾಖಿಗೆ ಬಹಳಷ್ಟು ಬಾಯ್ ಫ್ರೆಂಡ್ ಗಳಾದರು. ಆ ಬಾಯ್ ಫ್ರೆಂಡ್ ಗಳ ಜೊತೆ ಸುತ್ತಾಡಿದರು ಎಂಜಾಯ್ ಮಾಡಿದರು. ಇದರಿಂದ ರಾಖಿ ಸಾವಂತ್ ಬಾಯ್ ಫ್ರೆಂಡ್ ಗಳನ್ನು ಬದಲಿಸುವುದು ಶರ್ಟ್ ಬದಲಿಸಿದಂತೆ ಎನ್ನುತ್ತಾರೆ. ಆದರೆ ಈ ಮಧ್ಯೆ ರಾಖಿ ಸಾವಂತ್ ಖಿನ್ನತೆಯಿಂದ ಬಳಲುತ್ತಿದ್ದರು.

ನಾನು ಖಿನ್ನತೆಯಿಂದ ದೂರವಾಗಲು ಮೈಸೂರಿನ ಅದಿಲ್ ಖಾನ್ ದುರಾನಿ ಕಾರಣ. ಅದಿಲ್ ನಿಂದ ನಾನು ಸಹಜ ಸ್ಥಿತಿಗೆ ಬಂದೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಈಗ ಅದಿಲ್ ಜೊತೆಗಿನ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಸ್ವೀಟ್ ಹಾರ್ಟ್ ನನ್ನ ಜೀವನ ಎಂದೆಲ್ಲಾ ಬರದುಕೊಂಡಿದ್ದಾರೆ.

ರಾಖಿ ಸಾವಂತ್ ಗೆ ಫಿದಾ ಆಗಿರುವ ಆದಿಲ್ ಪ್ರೇಯಸಿ ರಾಖಿಗೆ ದುಬಾರಿ ಬಿಎಂಡಬ್ಲ್ಯೂ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ರಾಖಿ ತನ್ನ ಹೊಸ ಬಾಯ್ ಫ್ರೆಂಡ್ ಮೈಸೂರು ಮೂಲದ ಅದಿಲ್ ಜೊತೆಗಾದರೂ ಪರ್ನಮೆಂಟ್ ಆಗಿರುವರೆ ಎಂದು ಕಾದು ನೋಡಬೇಕು.

 
 
 
 
 
 
 
 
 
 
 

Leave a Reply