ಭಗವದ್ಗೀತೆ ಓದದಿದ್ದರೆ ಜನ್ಮ ವ್ಯರ್ಥ: ಪುತ್ತಿಗೆ ಶ್ರೀ

ಜಗತ್ತಿನ ಸಮಸ್ತ ಸಮಸ್ಯೆಗಳಿಗೆ ಪರಿಹಾರ ರೂಪವಾಗಿರುವ ಬದುಕಿನ ಸಾರ್ಥಕತೆಗೆ ಮಾರ್ಗದರ್ಶಿಯಾಗಿರುವ ಭಗವದ್ಗೀತೆಯನ್ನು ಜೀವನದಲ್ಲಿ ಒಮ್ಮೆಯಾದರೂ ಓದಲೇಬೇಕು ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. 
ಉಪಾಧ್ಯ ಪ್ರತಿಷ್ಠಾನ ಆಶ್ರಯದಲ್ಲಿ ಹೊಂಬೇಗೌಡನಗರದ ಸಂಕರ್ಷಣ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೃಹತ್ ಗೀತಾ ಲೇಖನ ಪ್ರಚಾರ ಅಭಿಯಾನದಲ್ಲಿ ಅವರು ಆಶೀರ್ವಚನ ನೀಡಿದರು.
ಭಗವದ್ಗೀತೆ ಮತಗ್ರಂಥ ಅಲ್ಲ, ಮನ:ಶಾಸ್ತ್ರ ಗ್ರಂಥ ಎಂದು ಹೇಳಿದ ಅವರು ಇವತ್ತಿನ ಶಿಕ್ಷಣ ಪದ್ಧತಿ ಸಂಸ್ಕೃತಿಯಿಂದ ದೂರವಾಗಿರುವ ಕಾರಣವೇ ಆತ್ಮಹತ್ಯೆ, ಕೊಲೆ, ಮನೋವ್ಯಾಧಿಗಳಂತಹ ಸಮಸ್ಯೆಗಳು ಬಾಧಿಸುತ್ತಿವೆ. ಸಮಾಜದಲ್ಲಿ
ಸಂಪಾದನೆಗಾಗಿ ವಿದ್ಯೆ ಎಂಬ ಚಿಂತನೆ ವ್ಯಾಪಿಸಿದೆ. ಅಶಾಂತಿ, ಅಭದ್ರತೆ ನೆಲೆಸಿದೆ. ಎಲ್ಲ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ನೂರಾರು ಮಂದಿಗೆ ಅವರು ಗೀತಾಲೇಖನ ದೀಕ್ಷೆ ಬೋಧಿಸಿದರು. 
ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಬಾ ರಾಮಚಂದ್ರ ಉಪಾಧ್ಯ, ಹೋಟೆಲ್ ಬ್ಯಾಂಕ್ ಅಧ್ಯಕ್ಷ ಶ್ರೀ ಶ್ರೀಪತಿ ಬಾಯರ್, ಆರೆಸ್ಸೆಸ್ ಮುಖಂಡ ಶ್ರೀ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply