ತೆರೆದ ಮನೆ ಕಾರ್ಯಕ್ರಮ

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ಲೈನ್-೧೦೯೮ ಉಡುಪಿಯ ವತಿಯಿಂದ ತೆರೆದ ಮನೆ ಕಾರ್ಯಕ್ರಮವು ಬಿ.ವಿ. ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೀಳಂಜೆ, ಬ್ರಹ್ಮಾವರ ಇಲ್ಲಿ ಆಯೋಜಿಸಲಾಯಿತು. ಚೈಲ್ಡ್ಲೈನ್ ೧೦೯೮ ಉಡುಪಿಯ ನಿರ್ದೇಶಕರಾದ ಶ್ರೀಯುತ ರಾಮಚಂದ್ರ ಉಪಾಧ್ಯಾಯರವರು ಕಾರ್ಯಕ್ರಮಕ್ಕೆ ಆಗಮಿಸಿರುವವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ಮಕ್ಕಳನ್ನುದ್ದೇಶಿಸಿ ಹಿತನುಡಿಗಳನ್ನಾಡುವ ಮೂಲಕ ಚೈಲ್ಡ್ಲೈನ್-೧೦೯೮ರ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಶ್ರೀಯುತ ಅಜಿತ್, ಅಧ್ಯಕ್ಷರು ಹಾವಂಜೆ ಗ್ರಾಮ ಪಂಚಾಯತ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಅಹವಾಲು ಸ್ವೀಕಾರ : 

ನಂತರ ಸಂವಾದ ಕಾರ್ಯಕ್ರಮದದಲ್ಲಿ ಶಾಲೆಯ ವಿದ್ಯಾರ್ಥಿಗಳು, ಸರಕಾರದ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ದೊರಕಿಸಿಕೊಡುವಂತೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಟವಾಡಲು ಬಾಲವನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ಶಾಲೆಗೆ ಶೌಚಾಲಯದ ವ್ಯವಸ್ಥೆಯ ಕುರಿತು ಬೇಡಿಕೆ ಇಟ್ಟಿರುತ್ತಾರೆ, ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಪ್ರೊಜೆಕ್ಟ್ರ್ ವ್ಯವಸ್ಥೆ ಕಲ್ಪಿಸುವಂತೆ, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಪುಸ್ತಕ ಇಡಲು ಕಬಟ್ ವ್ಯವಸ್ಥೆ ಮಾಡುವಂತೆ, ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಿಕ್ಷಣದ ಅಗತ್ಯವಿದ್ದು ಒಬ್ಬರು ಅತಿಥಿ ಶಿಕ್ಷಕರನ್ನು ನೇಮಿಸುವಂತೆ, ಶಾಲೆಯು ಹೆದ್ದಾರಿಗೆ ಸಮೀಪವಿರುವುದರಿಂದ ತುಂಬ ವಾಹನ ಸಂಚಾರವಿರುತ್ತದೆ ಆದುದರಿಂದ ಶಾಲೆಗೆ ಆವರಣ ಗೋಡೆಯನ್ನು ನಿರ್ಮಿಸುವಂತೆ, ಶಾಲೆಯ ವಠಾರದಲ್ಲಿ ಮದ್ಯಪಾನದ ಬಾಟಲಿಗಳನ್ನು ಎಸೆದು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಶಾಲೆಗೆ ಪೀಠೋಪಕರಣದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ಶಾಲೆಗೆ “ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮಿಷನ್” ವ್ಯವಸ್ಥೆ ಬೇಕು ಎಂಬ ಬೇಡಿಕೆಯನ್ನು ಶಾಲಾ ವಿದ್ಯಾರ್ಥಿನಿಯರು ಅಧಿಕಾರಿಗಳ ಮುಂದಿಟ್ಟಿರುತ್ತಾರೆ. ವಿದ್ಯಾರ್ಥಿನಿಯೊಬ್ಬಳ ಮನೆಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಆದುದರಿಂದ ಮನೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿನಿಯ ತಂದೆ ಮನವಿ ಮಾಡಿಕೊಂಡಿರುತ್ತಾರೆ. 

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಯುತ ಅಜಿತ್, ಅಧ್ಯಕ್ಷರು ಹಾವಂಜೆ ಗ್ರಾಮ ಪಂಚಾಯತ್, ಸರಕಾರಿ ಶಾಲೆಗಳಿಗೆ ನೀಡುವ ಅನುದಾನವನ್ನು, ಅನುದಾನಿತ ಶಾಲೆಗಳಿಗೆ ನೀಡಲು ಅವಕಾಶ ಇಲ್ಲವಾದುದರಿಂದ, ಅನುದಾನಿತ ಶಾಲೆಯ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ, ಅದುದರಿಂದ ದಾನಿಗಳ ಸಹಾಯದ ಮೂಲಕ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿರುತ್ತಾರೆ. ಮನೆಗೆ ವಿದ್ಯುತ್ ವ್ಯವಸ್ಥೆಯಿಲ್ಲ ಎಂಬ ವಿದ್ಯಾರ್ಥಿನಿಯ ಬೇಡಿಕೆಗೆೆ ಉತ್ತರಿಸಿದ ಇವರು, ಮಗುವಿನ ಮನೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಸಲುವಾಗಿ, “ಬೆಳಕು” ಯೋಜನೆಯಡಿ ಈಗಾಗಲೇ ಮೆಸ್ಕಾಂ ವಿಭಾಗಕ್ಕೆ ಅರ್ಜಿ ರವಾನಿಸಿರುವುದಾಗಿ ತಿಳಿಸಿರುತ್ತಾರೆ. ಗ್ರಂಥಾಲಯಕ್ಕೆ ಪುಸ್ತಕಗಳು ಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆಗೆ ಉತ್ತರಿಸಿದ ಚೈಲ್ಡ್ಲೈನ್-೧೦೯೮ ಉಡುಪಿಯ ನಿರ್ದೇಶಕರಾದ, ಶ್ರೀಯುತ ರಾಮಚಂದ್ರ ಉಪಾಧ್ಯಾಯ ಇವರು ಪುಸ್ತಕಗಳನ್ನು ಉಡುಪಿಯ ಕೇಂದ್ರಿಯ ಗ್ರಂಥಾಲಾಯದಿAದ ಕೊಡಿಸಲು ಪ್ರಯತ್ನಿಸುವುದಾಗಿ ಹಾಗೂ ವಿದ್ಯುತ್ ವ್ಯವಸ್ಥೆಯಿಲ್ಲದ ವಿದ್ಯಾರ್ಥಿನಿಯ ಮನೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಸಂದರ್ಭದಲ್ಲಿ ಸೋಲಾರ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ. 

ವಿವಿಧ ಇಲಾಖೆಗಳಿಂದ ಮಾಹಿತಿ ಕಾರ್ಯಕ್ರ :

ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ, ಕು.ಅಶಾಲತಾ ಇವರು ಮಕ್ಕಳಿಗೆ ವೈಯುಕ್ತಿಕ ಸ್ವಚ್ಚತೆ, ಕೈ ತೊಳೆಯುವ ವಿಧಾನ ಹಾಗೂ ಉತ್ತಮ ಆರೋಗ್ಯಕ್ಕೆ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿರುತ್ತಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯಾದ ಕು. ಸುನಂದ ಇವರು ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಕೆಲವು ಪ್ರಾಯೋಜಿಕತ್ವ, ಏಕಪೋಷಕತ್ವ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡಿರುತ್ತಾರೆ. ಶ್ರೀಯುತ ಉದಂiÀi ಕೋಟ್ಯಾನ್ ಕೀಳಂಜೆ ವಾರ್ಡ್ ಸದಸ್ಯರು ತೆರೆದ ಮನೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸಕರಾಮ ಇವರು ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ವಿವಿಧ ಉಪಯುಕ್ತ ಮಾಹಿತಿಗಳು ಗ್ರಾಮೀಣ ಮಟ್ಟದ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಹಾಗೂ ಇಲಾಖೆಗಳ ಸಹಕಾರ ನಮ್ಮ ಶಾಲೆಗೆ ಅಗತ್ಯವಿದೆ ಎಂದು ತಿಳಿಸಿದರು. 

ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮೀರಾ ಪೂಜಾರಿ, ಚೈಲ್ಡ್ಲೈನ್-೧೦೯೮ ಉಡುಪಿಯ ಸಹ ನಿರ್ದೇಶಕರಾದ ಶ್ರೀಯುತ ಗುರುರಾಜ್ ಭಟ್, ಶಾಲಾ ಶಿಕ್ಷಕ ವೃಂದ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ಪೂರ್ಣಿಮಾ ಕೀಳಂಜೆ, ಚೈಲ್ಡ್ಲೈನ್-೧೦೯೮ ಉಡುಪಿಯ ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶ್ರೀ ಪ್ರಮೋದ್ ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ಶ್ರೀಯುತ ಸುಕೇಶ್ ಅಧ್ಯಾಪಕರು, ಬಿ. ವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೀಳಂಜೆ ಇವರು ವಂದಿಸಿದರು.

 
 
 
 
 
 
 
 
 
 
 

Leave a Reply