ಬಿಜೆಪಿಯವರ ದ್ವಂದ್ವ ಹೇಳಿಕೆ ಅವರ ಮನಸ್ಥಿತಿಯ ಪ್ರತಿಬಿಂಬ ~ಗೀತಾ ವಾಗ್ಳೆ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮೊದಲು ಮತದಾರರಿಗೆ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪತ್ರಿಕಾ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿರುವ ದ್ವಂದ್ವ ಹೇಳಿಕೆಗಳು ಅವರ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಹೇಳಿದ್ದಾರೆ.ಚುನಾವಣೆಗೆ ಮುನ್ನ ಪ್ರಚಾರದ ಸಂದರ್ಭದಲ್ಲಿ ಮತದಾರರೇ, ಕಾಂಗ್ರೆಸ್ ಗ್ಯಾರಂಟಿಗಳಿಗೆ ಮರುಳಾಗದಿರಿ.ಅವರು ಸುಳ್ಳು ಹೇಳುತ್ತಿದ್ದಾರೆ,ಆ ಹಸಿ ಹಸಿ ಸುಳ್ಳುಗಳನ್ನು ನಂಬಿ , ಕಾಂಗ್ರೆಸ್ ಗೆ ಮತ ನೀಡಿ ಮೋಸ ಹೋಗಬೇಡಿ ಎಂಬ ಹೇಳಿಕೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬಿಜೆಪಿಯ ಅನೇಕ ನಾಯಕರು ನೀಡಿರುವುದನ್ನು ಪ್ರತಿಯೊಬ್ಬರೂ ಕಂಡಿದ್ದಾರೆ.ಚುನಾವಣೆ ಮುಗಿದು ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ “ಗ್ಯಾರಂಟಿಗಳನ್ನು ತಕ್ಷಣ ಜಾರಿಗೆ ತರಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ* ಎನ್ನುವುದರ ಮೂಲಕ ಈ ನಾಯಕರು ತಮ್ಮ ಬಣ್ಣ ಬದಲಾಯಿಸತೊಳ್ಳತೊಡಗಿದ್ದಾರೆ.ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾದ ತಕ್ಷಣ ಜನತೆಗೆ ನೀಡಿರುವ ವಾಗ್ದಾನಗಳನ್ನು ಅರ್ಥಾತ್ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೆ ತರುವತ್ತ ದೃಢಹೆಜ್ಜೆಗಳನ್ನು ಇಡುತ್ತಿರುವ ನಿಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಶಕ್ತಿ ಈಗಾಗಲೇ ಅನುಷ್ಠಾನಕ್ಕೆ ಬಂದಿದ್ದು ಮಹಿಳೆಯರಿಂದ ಅಭೂತಪೂರ್ವ ಬೆಂಬಲ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.ಈ ಯೋಜನೆಯ ಅದ್ಭುತ ಯಶಸ್ಸಿನ ಹಿಂದೆಯೇ ಇನ್ನೊಂದು ಗ್ಯಾರಂಟಿ ಗೃಹಜ್ಯೋತಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಗೆ ಅರ್ಜಿ ಸಲ್ಲಿಸುವ ಕೆಲಸ ಈಗ ನಡೆಯುತ್ತಿದೆ.ಇನ್ನೆರಡು ತಿಂಗಳಲ್ಲಿ ಮಹಿಳೆಯರ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯು ಎಲ್ಲರ ಹೊಸ್ತಿಲಲ್ಲೂ ಕಾಲಿರಿಸಲಿದ್ದಾಳೆ.ಈ ಎಲ್ಲಾ ಗ್ಯಾರಂಟಿಗಳು ಒಂದಾದ ಬಳಿಕ ಒಂದು ಅನುಷ್ಠಾನಕ್ಕೆ ಬರುವುದು ಗ್ಯಾರಂಟಿಯಾದಾಗ ಬಿಜೆಪಿಯ ಮಹಿಳಾ ನಾಯಕಿ ಶ್ರೀಮತಿ ನಯನಾ ಗಣೇಶ್ ಅವರು ಗ್ಯಾರಂಟಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಅಪಸ್ವರ ಎಬ್ಬಿಸುತ್ತಿದ್ದಾರೆ.ನಯನಾ ಗಣೇಶ್ ಅವರೇ, ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳು ಮಾತ್ರ ಕಳೆದಿದೆ.ಈ ಒಂದು ತಿಂಗಳಲ್ಲಿಯೇ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವ ಎಲ್ಲಾ ವ್ಯವಸ್ಥೆಗಳೂ, ಪ್ರಯತ್ನ ಗಳು ನಡೆಯುತ್ತಿವೆ.ಕೆಲವೊಂದು ಪೂರ್ಣಗೊಂಡು ಮತದಾರರನ್ನು ಈಗಾಗಲೇ ತಲುಪಿವೆ.ಇನ್ನೊಂದೇ ತಿಂಗಳಲ್ಲಿ ಎಲ್ಲದರ ಸ್ಪಷ್ಟ ಚಿತ್ರಣ ಬರಲಿದೆ.ರಾಜ್ಯದಲ್ಲಿರುವುದು ನುಡಿದಂತೆ ನಡೆವ ಕಾಂಗ್ರೆಸ್ ಸರ್ಕಾರ.ಒಂಭತ್ತು ವರ್ಷಗಳಾದರೂ ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾದ ಬಿಜೆಪಿ ಸರ್ಕಾರವಲ್ಲ.ಎಂದು ಗೀತಾ ವಾಗ್ಳೆ ಹೇಳಿದ್ದಾರೆ.
ಗ್ಯಾರಂಟಿಗಳನ್ನು ತಕ್ಷಣ ಜಾರಿಗೆ ತರದೇ ಇದ್ದಲ್ಲಿ ಮತದಾರರೇ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳುತ್ತಿದ್ದಾರೆ.ರಾಜ್ಯದ ಮತದಾರರು ಈಗಾಗಲೇ ತಮಗೇ ತಕ್ಕ ಪಾಠ ಕಲಿಸುವುದರ‌ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದಿದ್ದಾರೆ.ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಆರಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ಖಂಡಿತಾ ಮಾಡುತ್ತದೆ.ಅಲ್ಲದೇ ಮತದಾರರು‌ ತಾಳ್ಮೆಯಿಂದ ಗ್ಯಾರಂಟಿಗಳಿಗಾಗಿ ಕಾಯುತ್ತಿದ್ದಾರೆ.ಆದರೆ ವಿರೋಧ ಪಕ್ಷದ ನಾಯಕರು ಪ್ರಸ್ತುತ ಮುಳ್ಳಿನ ಮೇಲೆ ಕುಳಿತವರಂತೆ ಚಡಪಡಿಸುತ್ತಿದ್ದಾರೆ .ಒಲ್ಲದ ಗಂಡನಿಗೆ ಮೊಸರಲ್ಲಿಯೂ ಕಲ್ಲು ಎಂಬಂತೆ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಏನು ಮಾಡಿದರೂ ಬಿಜೆಪಿಗೆ ಸಹ್ಯವಾಗುತ್ತಿಲ್ಲ.ಗ್ಯಾರಂಟಿ ಅನುಷ್ಠಾನ ಆದರೂ ಒಲ್ಲೆ, ಆಗದಿದ್ದರೂ ಒಲ್ಲೆ ಎನ್ನುವ‌ ದ್ವಂದ್ವ ಮನಸ್ಥಿತಿ ಸಧ್ಯಕ್ಕೆ ಅವರದಾಗಿದೆ.ಎಂದು ಗೀತಾ ವಾಗ್ಳೆ ಹೇಳಿದ್ದಾರೆ.
ಕೇಂದ್ರ ಸರ್ಕಾರವನ್ನು ಅನ್ನಭಾಗ್ಯದ ಅಕ್ಕಿ ನೀಡುವಂತೆ ಒತ್ತಾಯಿಸುತ್ತಿರುವುದನ್ನು ಉಡುಪಿಯ ಸಂಸದೆಯಾದಿಯಾಗಿ ಹಲವಾರು ನಾಯಕರು ಹೀಯಾಳಿಸಿ ಹೇಳಿಕೆ ನೀಡುತ್ತಿದ್ದಾರೆ.ಒಬ್ಬ ಮಹಿಳಾ ಸಂಸದೆಯಾಗಿ ಶೋಭಾ ಕರಂದ್ಲಾಜೆ ಅವರಿಗೆ ಗೃಹಿಣಿಯರ ಅಡುಗೆ ಮನೆಯೊಳಗಿನ ಕಷ್ಟಗಳು ಗೊತ್ತಿರಬೇಕಿತ್ತು,ಅರಿತುಕೊಳ್ಳಬೇಕಿತ್ತು.ಅಕ್ಕಿ, ಬೇಳೆಕಾಳುಗಳು,ಅಕ್ಕಿ, ಗ್ಯಾಸ್ ಸಿಲಿಂಡರ್ ದರ ಏರಿಕೆ ಇವುಗಳಿಂದ ಆಕೆ ಪಡೆಯುವ ಕಷ್ಟವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಸಂಸದರು ಮಾಡಬೇಕಿತ್ತು..ರಾಜ್ಯದ ಸಮಸ್ತ ಗೃಹಿಣಿಯರ ಪರವಾಗಿ ಕೇಂದ್ರದ ಮೋದಿ ಸರ್ಕಾರವನ್ನು ಅಕ್ಕಿಗಾಗಿ ಆಗ್ರಹಿಸಬೇಕಿತ್ತು.ಆದರೆ ಅದ್ಯಾವುದನ್ನೂ ಮಾಡದೇ ರಾಜ್ಯ ಸರ್ಕಾರವನ್ನು, ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸುವ ಹೇಳಿಕೆಗಳನ್ನು ಅವರು ನೀಡುತ್ತಿರುವುದು ಮತದಾರರಿಗೆ ಅವರು ಮಾಡುತ್ತಿರುವ ಅನ್ಯಾಯ.ಎಂದು ಶ್ರೀಮತಿ ಗೀತಾ ವಾಗ್ಳೆ ಅವರು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply