2022-23 ಸಾಲಿನ ರಾಜ್ಯ ಬಜೆಟ್ ಸರ್ವಸ್ಪರ್ಶಿ ಮತ್ತು ಜನಪರ- ನಯನಾ ಗಣೇಶ್

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿರುವ 2022-23 ಸಾಲಿನ ರಾಜ್ಯ ಬಜೆಟ್ ಸರ್ವಸ್ಪರ್ಶಿ ಮತ್ತು ಜನಪರ ಬಜೆಟ್ ಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.ಸರ್ವರಿಗೆ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆಗಳ ನಿರ್ಮಾಣ,ವೈದ್ಯಕೀಯ ಸೌಲಭ್ಯಗಳಿಗಾಗಿ ಯಶಸ್ವಿನಿ ವಿಮಾ ಯೋಜನೆ ಮತ್ತೆ ಜಾರಿಗೆ ತರಲಾಗಿದ್ದು,ವಿಧವಾ ವೇತನ,ಆಶಾ ಕಾರ್ಯಕರ್ತೆಯರ ಮತ್ತು ಬಿಸಿಯೂಟ ಸಹಾಯಕರ ಗೌರವ ಧನವನ್ನು ಹೆಚ್ಚಿಸಲಾಗಿದೆ,ಕಾಶಿ ಯಾತ್ರೆ ಗೆ ತೆರಳುವ ಭಕ್ತರಿಗೆ 5 ಸಾವಿರ ಸಹಾಯ ಧನ,ಮುಜರಾಯಿ ದೇವಸ್ಥಾನ ಗಳಿಗೆ ಸ್ವಾಯತ್ತತೆ,ನದಿಗಳಿಗೆ ಉಪ್ಪು ನೀರು ತಡೆಗಟ್ಟಲು ಖಾರ್ ಲ್ಯಾ0ಡ್ ಯೋಜನೆ ಅನುಷ್ಠಾನ,ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸoಯೋಜನೆ ಮೂಲಕ 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿ ಗೆ ನೆರವು ನೀಡಲು ಮತ್ಸ್ಯ ಸಿರಿ ಯೋಜನೆ ಜಾರಿ. ನವ ಭಾರತಕ್ಕಾಗಿ ನವ ಕರ್ನಾಟಕ ಈ ಬಾರಿಯ ಬಜೆಟ್ ಯಾಗಿದ್ದು ಎಲ್ಲಾ ವರ್ಗ,ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply