ನವರಾತ್ರಿಯ ಒಂಬತ್ತನೆಯ ದಿನ ದೇವಿ “ಸಿದ್ಧಿದಾತ್ರಿ”

ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ.ದೇವಿ ಸಿದ್ಧಿದಾತ್ರಿ ಆಧ್ಯಾತ್ಮಿಕ ಆನಂದವನ್ನು ಹುಡುಕುವವರನ್ನು ಆಶೀರ್ವದಿಸುತ್ತಾಳೆ. ಮಾತೃದೇವತೆಯ ಈ ರೂಪವು ಬಲಗೈಯಲ್ಲಿ ಚಕ್ರವನ್ನು ಮತ್ತು ಗದೆಯನ್ನು ಹಾಗೂ ಎಡಗೈಯಲ್ಲಿ ಶಂಖವನ್ನು ಮತ್ತು ಕಮಲವನ್ನು ಹಿಡಿದುಕೊಂಡಿದ್ದಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ.

ಸಿದ್ಧಿದಾತ್ರಿ ದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ ಹಾಗೂ ಸಿಂಹ ಮೇಲೆ ಸವಾರಿ ಮಾಡುತ್ತಾಳೆ. ಅವಳು ಕೆಂಪು ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ.

ಸಿದ್ಧಿದಾತ್ರಿಯ ಅರ್ಥ – “ಸಿದ್ಧಿ” ಎಂದರೆ ಪರಿಪೂರ್ಣತೆ ಆದರೆ “ದಾತ್ರಿ” ಎಂದರೆ “ಕೊಡುವವಳು” ಆದ್ದರಿಂದ ಅವಳನ್ನು ಮಾತಾ ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ.

ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು (ಪರಿಪೂರ್ಣತೆ) ನೀಡುತ್ತಾಳೆ. ಆದ್ದರಿಂದ ಅವಳನ್ನು ಸಿದ್ಧಿದಾತ್ರಿ ದೇವಿ ಎಂದು ಕರೆಯಲಾಗುತ್ತದೆ. ಸಿದ್ಧಿದಾತ್ರಿಯ ಇನ್ನೊಂದು ಹೆಸರು ಲಕ್ಷ್ಮಿ ದೇವಿ, ಅವಳು ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತಾಳೆ.

ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತದೆ. ಸಿದ್ಧಿಯು ‘ಬಯಕೆ’ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು ‘ಒದಗಿಸುವವಳು’ ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದವನ್ನು ರೂಪುಗೊಂಡಿದೆ. ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ.

ನಾಲ್ಕು ಕೈಗಳನ್ನು ಹೊಂದಿರುವ ಕೆಂಪು ಸೀರೆಯನ್ನು ಧರಿಸಿರುವ ದೇವಿಯ ವಿಗ್ರಹವು ಕಮಲದ ಹೂವಿನ ಮೇಲೆ ಆರೋಹಿಸಲ್ಪಟ್ಟಿದೆ. ಅವಳು ಬಲಗೈಯಲ್ಲಿ ಗದಾ ಮತ್ತು ಚಕ್ರವನ್ನು ಹಿಡಿದಿದ್ದಾಳೆ, ಎಡಗೈಯು ಹೂವು ಮತ್ತು ಶಂಖವನ್ನು ಹಿಡಿದಿರುವುದು ಕಾಣುತ್ತದೆ. ಮಾ ಸಿದ್ಧಿದಾತ್ರಿಯನ್ನು ಅಷ್ಟ ಮಹಾ ಸಿದ್ಧಿಗಳ ಸೃಷ್ಟಿಕರ್ತೆ ಎಂದೂ ಕರೆಯಲಾಗುತ್ತದೆ. ಭಕ್ತರು ದುರ್ಗಾ ದೇವಿಯನ್ನು ಪರಿಪೂರ್ಣತೆ, ಶಕ್ತಿ ಮತ್ತು ವೈಭವವನ್ನು ಸಂಕೇತಿಸುತ್ತದೆ.

 
 
 
 
 
 
 
 
 
 
 

Leave a Reply