ಹೈನುಗಾರರಿಂದ ಖರೀದಿಸಿದ ಪ್ರತಿ ಲೀಟರ್ ಹಾಲಿಗೆ ರೂ.1/-ವಿಶೇಷ ಪ್ರೋತ್ಸಾಹ ಧನ~  ರವಿರಾಜ್ ಹೆಗ್ಡೆ

ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ  ದಿನಾಂಕ 01.03.20222ರಿಂದ 30.04.2022ರವರೆಗೆ ಅನ್ವಯವಾಗುವಂತೆ, ಪ್ರತಿ ಲೀಟರ್ ಹಾಲಿನ ಖರೀದಿಗೆ ವಿಶೇಷ ಪ್ರೋತ್ಸಾಹ ದರ ರೂ.1/-ಹೆಚ್ಚಳ ಮಾಡಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೇಶದಾದ್ಯಂತ ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕಡಿಮೆಯಾಗಿ, ಒಕ್ಕೂಟದ ನಿರ್ವಹಣೆಗೆ ಸಂಪನ್ಮೂಲದ ಕೊರತೆಯಾದುದರಿಂದ ಹಾಲು ಉತ್ಪಾದಕರ ಖರೀದಿ ದರವನ್ನು ಕಡಿಮೆ ಮಾಡಲಾಗಿತ್ತು.  
ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಚೇತರಿಸಿಕೊಂಡಿರುವುದರಿ0ದ “ನಂದಿನಿ” ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಗಣನೆಗೆ ತೆಗೆದುಕೊಂಡು, ಒಕ್ಕೂಟದ ವ್ಯಾಪ್ತಿಯ ಹೈನುಗಾರರನ್ನು ಉತ್ತೇಜಿಸುವ ಉದ್ದೇಶದಿಂದ ಹಾಲಿನ ಖರೀದಿ ಪ್ರೋತ್ಸಾಹ ದರವನ್ನು ಪರಿಷ್ಕರಿಸಿ,  ಈಗಾಗಲೇ ನೀಡುತ್ತಿರುವ ಗುಣಮಟ್ಟದ ಪ್ರತಿ ಲೀಟರ್ ಹಾಲಿಗೆ ರೂ.29.00ಕ್ಕೆ ರೂ.1.00ವಿಶೇಷ ಪ್ರೋತ್ಸಾಹಧನ ಸೇರಿಸಿ ಹಾಲಿನ ಖರೀದಿ ದರ ರೂ.30.00ರಂತೆ ನಿಗಧಿಪಡಿಸಲಾಗಿದೆ.
ಹಾಲು ಉತ್ಪಾದಕರು ಹಾಲು ಖರೀದಿ ಪ್ರೋತ್ಸಾಹ ದರ ಹೆಚ್ಚಳದ ಪ್ರಯೋಜನ ಪಡೆದು, ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ, ಸಂಘಗಳಿಗೆ ನೀಡುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುತ್ತಾರೆ.
                             
                  
 
 
 
 
 
 
 
 
 
 
 

Leave a Reply