ಮಣೂರು ಶ್ರೀ ಮಹಾಲಿಂಗೇಶ್ವರ ದೇವಳದ ವಿಜೃಂಭಣೆ ರಥೋತ್ಸವ

ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ಶನಿವಾರ ಜರಗಿತು
ಮಣೂರು ರಾಷ್ಟ್ರೀಯ  ಹೆದ್ದಾರಿ ಮೂಲಕ ಕೋಟ ಅಮೃತೇಶ್ವರಿ ದೇವಸ್ಥಾನ ಸಮೀಪದವರೆಗೆ ಆಗಮಿಸಿ ಪುನಹ ಶ್ರೀ ದೇವಳದವರೆ ರಥೋತ್ಸವ ಸಂಪನ್ನಗೊoಡಿತು.


ವಿವಿಧ ಬಗೆಯ ಗೊಂಬೆಗಳು,ಕೀಲು ಕುದುರೆ,ಕೇರಳ ಮಾದರಿಯ ಚಂಡೆ ನಾದನ,ಸಿಡಿಮದ್ದು ಪ್ರದರ್ಶನ ಭಕ್ತರನ್ನು ವಿಶೇಷವಾಗಿ ಗಮನ ಸೆಳೆಯಿತು.
ಶ್ರೀ ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಸಾರಥ್ಯದಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ವೈಭವ ಪೂರಿತ ಜಾತ್ರೆ ನೆರವೆರಿತು.
ಆ ಪ್ರಯುಕ್ತ ಅಪರಾಹ್ನ ಮಹಾಅನ್ನಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು.

 
 
 
 
 
 
 
 
 
 
 

Leave a Reply