“ಜೀವಶಾಸ್ತ್ರ ಬೋಧನೆ ತರಗತಿಗಳ ಹೊರಗೆ ನಡೆಯಲಿ” ~ಡಾ ಮಹಾಬಲೇಶ್ವರ ರಾವ್

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಜೀವಶಾಸ್ತ್ರ ಬೋಧನವಿಧಾನದ ವಿದ್ಯಾರ್ಥಿ- ಶಿಕ್ಷಕರು ಈಚೆಗೆ ಕಾರ್ಯಕ್ರಮ ವೊಂದನ್ನು ಏರ್ಪಡಿಸಿ ಜೀವಶಾಸ್ತ್ರ ಬೋಧನೆಯ ಆಳ ಆಗಲಗಳ ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡಿ  ಕಳೆದ ನಾಲ್ಕೈದು ದಶಕಗಳಲ್ಲಿ ಜೀವಶಾಸ್ತ್ರದ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗಿರುವುದರಿಂದ ಸಾಂಪ್ರದಾಯಿಕ ಜೀವಶಾಸ್ತ್ರ ಹಿನ್ನೆಲೆಗೆ ಸರಿದು ಪರಿಸರ ವಿಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಶಾಖೆಗಳು ಪ್ರಬಲವಾಗಿವೆ.ಹೀಗಾಗಿ ಚಿತ್ರರಚನಾ ಕೌಶಲಗಳು,ಪ್ರಯೋಗ ಕೌಶಲಗಳು, ಸೌಂದರ್ಯ ಪ್ರಜ್ಞೆಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲ.ನಾವು ಜೀವಶಾಸ್ತ್ರವನ್ನು ತರಗತಿ ಕೋಣೆಗಳಿಂದ ಹೊರಗೆ ತಂದು ನಿಸರ್ಗದ ಮಡಿಲಿನಲ್ಲಿ ಬೋಧಿಸಲು ಯತ್ನಿಸಬೇಕು.ಜೀವಶಾಸ್ತ್ರದ ಅಧ್ಯಾಪಕರು ಸ್ವತಃ ನಿಸರ್ಗ ಪ್ರೇಮಿಗಳಾಗಿ ವಿದ್ಯಾರ್ಥಿಗಳಲ್ಲೂ ಜೀವಾನುಕಂಪೆ ಮೂಡಿಸಬೇಕು ಎಂದು ನುಡಿದರು.ವಿದ್ಯಾರ್ಥಿ ಶಿಕ್ಷಕರು ಸಮೂಹಗಾಯನ ,ಪ್ರಬಂಧಮಂಡನೆ,ನೃತ್ಯ, ರೂಪಕ,ಅಭಿನಯಗೀತೆ ಮೂಲಕ ವಿಷಯಗಳನ್ನು ಪ್ರಸ್ತುತ ಪಡಿಸಿದರು.ಪೂಜಾ ಸ್ವಾಗತ ಕೋರಿದರೆ ಸ್ವಾತಿ ಧನ್ಯವಾದ ಸಲ್ಲಿಸಿದರು. ಸೌಮ್ಯ. ಕೆ
 ಕಾರ್ಯಕ್ರಮ ನಿರ್ವಹಣೆ ಮಾಡಿದರು.
 
 
 
 
 
 
 
 
 
 
 

Leave a Reply