ರೋಟರಾಕ್ಟ್ ಮಣಿಪಾಲ ಸೆಂಟ್ರಲ್ ಮತ್ತು ರೋಟರಿ ಮಣಿಪಾಲ ವತಿಯಿಂದ ಸಮುದ್ರ ತೀರವನ್ನು ಸ್ವಚ್ಚ

ಬೀಚ್‍ಗಳು ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಗೊಳ್ಳಲಿದ್ದು, ಸ್ಥಳೀಯರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯ. ಅಲ್ಲದೇ ಸಚ್ಛವಾಗಿರುವ ಕಡೆಯಲ್ಲಿ ಯಾರೂ ಸಹ ತ್ಯಾಜ್ಯ ಎಸೆಯಲು ಇಚ್ಚಿಸುವುದಿಲ್ಲ.  ಸಮುದ್ರ ದಡದಲ್ಲಿ ಎಸೆಯುವ ತಾಜ್ಯಗಳು ಸಮುದ್ರ ಸೇರಿ, ಜಲಚರಗಳು ಮತ್ತು ಮೀನುಗಾರರ ಜೀವನದ ಮೇಲೂ ಸಹ ವ್ಯತಿರಿಕ್ತ ಪರಿಣಾಮ ಬೀರುವುದರಿಂದ, ಬೀಚ್‍ಗಳಲ್ಲಿ ಸ್ವಚ್ಛತೆ ಕಾಪಾಡುವುದು ಅವಶ್ಯಕ. 
ಸಮುದ್ರ ತೀರ ಸ್ವಚ್ಛವಾಗಿದ್ದರೆ ಕಡಲೂ ಸಹ ಸ್ವಚ್ಚವಾಗಲಿದೆ, ಇದರಿಂದ ಸಮುದ್ರ ಮಾಲಿನ್ಯ ಸಹ ಕಡಿಮೆಯಾಗಲಿದ್ದು, ಸಮೀಕ್ಷೆ ಪ್ರಕಾರ ಸಮುದ್ರ ತೀರದಿಂದ 1.5 ಕಿಮೀ ಸಮುದ್ರ ಒಳಗೆ 40 ರಿಂದ 45 ಸಾವಿರ ಪ್ಲಾಸ್ಟಿಕ್ ವಸ್ತುಗಳು ಶೇಖರವಾಗಲಿದ್ದು, ಇದರಿಂದ ಜಲಚರಗಳಿಗೆ ಮತ್ತು ಮೀನುಗಾರರಿಗೆ ಸಹ ತೊಂದರೆಯಾಗಲಿದೆ, ಸಮುದ್ರ ತೀರದಲ್ಲಿ ತ್ಯಾಜ್ಯವನ್ನು ಎಸೆಯದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
 
ಪ್ರತೀ ಭಾನುವಾರದಂದು ಸಮುದ್ರ ತೀರವನ್ನು ಸ್ವಚ್ಚ ಗೊಳಿಸುವ‌ ಕಾರ್ಯಕ್ರಮವನ್ನು ಯುವ ಪಡೆಯನ್ನು ಹೊಂದಿರುವ ರೋಟರಾಕ್ಟ್ ಮಣಿಪಾಲ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ಮಣಿಪಾಲದಿಂದ‌ ಅಯೋಜಿಸಲಾಗುತ್ತಿದೆ.‌
 
ಭಾನುವಾರದಂದು ವಿವಿಧ  ರೋಟರಾಕ್ಟ್ ಕ್ಲಬ್‌ ಗಳ‌ ಯುವಕ ಯುವತಿಯರು ಪಡುಕೆರೆ ಸಮುದ್ರ ತೀರವನ್ನು ಸ್ವಚ್ಛಗೊಳಿಸಿದರು. ಸಮುದ್ರ ತೀರದಲ್ಲಿ ಕಸ , ಗ್ಲಾಸ್ ಬಾಟಲಿಗಳು, ಬಿಸಾಡುವ ನಾಗರೀಕರಲ್ಲಿ ಸಮುದ್ರ ತೀರದ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ‌ ಪ್ರಮುಖ ಉದ್ದೇಶವಾಗಿದೆ. 
ರೋಟರಾಕ್ಟರ್ ರೇಶ್ಮ , ಮಹಾಲಸಾ, ಶ್ರವಣ್ , ಇವರ ನೇತೃತ್ವದಲ್ಲಿ ಎಲ್ಲ  ರೋಟರಾಕ್ಟರ್  ಗಳು ಭಾಗವಹಿಸಿದ್ದರು. ಬೆಂಗಳೂರಿನ ಬಸವೇಶ್ವರ ನಗರದ ರೋಟರಾಕ್ಟರ್ ಗಳು ಭಾಗವಹಿಸಿದ್ದು ವಿಶೇಷವಾಗಿತ್ತು​. 
 
 
 
 
 
 
 
 
 
 
 

Leave a Reply