ನಿವೃತ್ತ ಯೋಧ ‘ನಿವೃತ್ತ ಸುಬೇದಾರ್/ಮೇಜರ್ ಗಣೇಶ ಅಡಿಗ, ಪಾರಂಪಳ್ಳಿ’ ಇವರಿಗೆ ಸನ್ಮಾನ

ಕೋಟ : ಭಾರತೀಯ ಸೇನಾ ವಿಭಾಗದಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಾಲಿಗ್ರಾಮದ ಪಾರಂಪಳ್ಳಿಯ ನಿವಾಸಿ ಗಣೇಶ ಅಡಿಗ ಇವರನ್ನು ವಿವೇಕ ಪ.ಪೂ.ಕಾಲೇಜಿನ ವತಿಯಿಂದ ಸಂಮ್ಮಾನಿಸಲಾಯಿತು.
ವಿವೇಕ ಪಪೂ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ನಿವೃತ್ತ ಯೋಧರನ್ನು ಪರಿಚಯಿಸಿ, ಸ್ವಾಗತಿಸಿ, ಇವರು 1990 ಮದ್ರಾಸ್ ಇಂಜಿನಿಯರ್ ಗ್ರೂಪ್ ಬೆಂಗಳೂರಿನಲ್ಲಿ ಸೇರ್ಪಡೆಗೊಂಡು ಮಿಲಿಟರಿ ಟ್ರೈನಿಂಗ್ ಪೂರೈಸಿ, ಭಾರತೀಯ ಸೇನೆಯ, ಭೂಸೇನೆಯಲ್ಲಿ 18 ವರ್ಷ, ವಾಯುಸೇನೆಯಲ್ಲಿ11 ವರ್ಷ ಮತ್ತು ನೌಕಾಸೇನೆಯಲ್ಲಿ ೨ ವರ್ಷ ಸೇವೆ ಸಲ್ಲಿಸುವ ಮೂಲಕ ಸೇನೆಯ ಮೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅಪರೂಪ ಅವಕಾಶ ಪಡೆದ ಗಣೇಶ ಅಡಿಗ ಮತ್ತು ೩೧ ವರ್ಷಗಳ ಪೂರ್ಣ ಸೇವೆ ಸಲ್ಲಿಸಿ 7 ಹಂತದ ಪದನ್ನೊತಿ ಹೊಂದಿ ಕೊನೆಯಲ್ಲಿ ಸುಬೇದಾರ್ ಮೇಜರ್ ಆಗಿ ನಿವೃತ್ತಿ ಹೊಂದಿದ ಅವರ ಕಾರ್ಯಕ್ಷಮತೆಗೆ ಗೌರವ ಲೆಪ್ಟಿನೆಂಟ್ ಬಿರುದನ್ನು ಪಡೆದಿರುವ ನಮ್ಮ ಸಂಸ್ಥೆಯ ಮೊದಲ ಮತ್ತು ಹೆಮ್ಮೆಯ ಹಳೆಯ ವಿದ್ಯಾರ್ಥಿಎಂದು ತಿಳಿಸಿ ಇಂದಿನ ವಿದ್ಯಾರ್ಥಿಗಳಿಗೆ ನಿಜವಾಗಿ ಅವರು ಆದರ್ಶಪ್ರಾಯರು, ಅನುಸರಣೀಯರು ಎಂದು ತಿಳಿಸಿದರು.
ಸಂಮ್ಮಾನ ಸ್ವೀಕರಿಸಿ ಮತನಾಡಿ ಗಣೇಶ ಅಡಿಗ ತನ್ನ ವಿದ್ಯಾಭ್ಯಾಸದ ದಿನಗಳನ್ನು ಮತ್ತು ಸೇನೆಯಲ್ಲಿನ ತನ್ನ ಅನುಭವಗಳನ್ನು ಹಂಚಿಕೊAಡು ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಇರುತ್ತದೆ ಆದರೆ ಸಿಕ್ಕ ಅವಕಾಶವನ್ನ ಸದುಪಯೋಗಿಸಿಕೊಂಡು ನಿರಂತರ ಪರಿಶ್ರಮದಿಂದ ಉತ್ತುಂಗ ಸ್ಥಾನಕ್ಕೆ ಬರಲು ಸಾಧ್ಯ ಎಂದು ತಿಳಿಸಿದರು.

ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ವಿವಿಧ ಅವಕಾಶಗಳ ಬಗ್ಗೆ ವಿವರಿಸಿದರು. ಕಾಲೇಜಿನ ಉಪನ್ಯಾಸಕ ವರ್ಗ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸದಾಶಿವ ಹೊಳ್ಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಭಾರತೀಯ ಸೇನಾ ವಿಭಾಗದಲ್ಲಿ ೩೧ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಾಲಿಗ್ರಾಮದ ಪಾರಂಪಳ್ಳಿಯ ನಿವಾಸಿ ಗಣೇಶ ಅಡಿಗ ಇವರನ್ನು ವಿವೇಕ ಪ.ಪೂ.ಕಾಲೇಜಿನ ವತಿಯಿಂದ ಸಂಮ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ, ಉಪನ್ಯಾಸಕರಾದ ಸದಾಶಿವ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply