ರಾತ್ರೋರಾತ್ರಿ ಪ್ರಸಿದ್ಧಳಾದ ಬಲೂನು ಮಾರುವ ಹುಡುಗಿ ಕಥೆ

ಇದು ಸೋಷಿಯಲ್ ಮೀಡಿಯಾ ಜಮಾನಾ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಯಾರು ಏಳ್ತಾರೆ, ಯಾರು ಬೀಳ್ತಾರೆ ಎನ್ನಲಾಗದಷ್ಟು ಅಯೋಮಯ.
ಕೇರಳದ ದೇವಸ್ಥಾನವೊಂದರ ಬಳಿ ಬಲೂನ್ ಮಾರುತ್ತಿದ್ದ ಯುವತಿ ಕಿಸ್ಟು ಜೀವನದಲ್ಲಿ ಆದ ದಿಢೀರ್ ಬದಲಾವಣೆಯೂ ಇಂಥದ್ದೇ. ವೃತ್ತಿಪರ ಫೋಟೋಗ್ರಾಫರ್ ಅರ್ಜುನ್ ಕೃಷ್ಣನ್ ಕ್ಲಿಕ್ಕಿಸಿದ ಫೋಟೋಗಳಲ್ಲಿ ಕಿಸ್ಟು ಮತ್ತಷ್ಟು ಅಂದವಾಗಿ‌ ಕಂಡಳು. ಈ ಫೋಟೋಗಳಲ್ಲಿ ಒಂದನ್ನು ಅರ್ಜುನ್ ತಮ್ಮ‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ರಾತ್ರೋರಾತ್ರಿ ಈ‌ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತು.

ಈ ಬಗ್ಗೆ ಮಾತನಾಡಿದ ಅರ್ಜುನ್ ಕೃಷ್ಣನ್, ‘ಕಳೆದ ಜನವರಿ 17ರಂದು ಅಂದಲೂರು ಕಾವು ಉತ್ಸವದಲ್ಲಿ ಕಿಸ್ಟು ಫೋಟೋ ತೆಗೆದಿದ್ದೆ. ಆಕೆಯ ಅಟ್ರ್ಯಾಕ್ಟಿವ್ ಕ್ಯಾರೆಕ್ಟರ್ ನನ್ನನ್ನು ಸೆಳೆದಿತ್ತು’ ಎಂದಿದ್ದಾರೆ.
ಈ ಫೋಟೋಗಳನ್ನು‌ ನೋಡಿದ ಮೇಕಪ್ ಕಲಾವಿದೆ ರೆಮ್ಯಾ ಪ್ರಜುಲ್, ಕಿಸ್ಟುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿ ರೂಪದರ್ಶಿಯನ್ನಾಗಿಸಿದ್ದಾರೆ.
ಇದರ ಪರಿಣಾಮ ಬಲೂನ್ ಮಾರುವ ಹುಡುಗಿ ಕಿಸ್ಟು ರಾತ್ರೋರಾತ್ರಿ ಮಾಡೆಲ್ ಆಗಿ ರೂಪುಗೊಂಡಿದ್ದಾಳೆ.

 
 
 
 
 
 
 
 
 
 
 

Leave a Reply