ಜಟಾಯುರಾಮನ ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣಕ್ಕೆ ಚಾಲನೆ

ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಮ್ ಎಂಬಲ್ಲಿರುವ ರಾಮಾಯಣದ ಜಟಾಯು ಮೋಕ್ಷ ಪಡೆದ ಪವಿತ್ರ ಸ್ಥಳ ಜಟಾಯು ರಾಮನ ಬೆಟ್ಟಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ 1008 ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಶುಕ್ರವಾರದಂದು ಉಡುಪಿ ಶ್ರೀ ಪೇಜಾವರ ಮಠಾಧೀಶರೂ ಅಯೋಧ್ಯಾ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ‌ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾಲನೆ ನೀಡಿದರು . ಬಳಿಕ ನಡೆದ ಧರ್ಮಸಭೆಯಲ್ಲಿ ಮಲಯಾಳಂ ಭಾಷೆಯಲ್ಲಿಯೇ ಅನುಗ್ರಹ ಸಂದೇಶ ನೀಡಿ ಸೀತಾಮಾತೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ದುಷ್ಟ ರಾವಣನೆದುರು ಸೆಣಸಾಟಕ್ಕೆ ನಿಂತ ಜಟಾಯುವಿನ‌ ಸ್ರ್ತೀ ಪರವಾದ ನಿಲುವು ಸಂವೇದನೆಗಳು ನಮಗೆಲ್ಲ ಮಾದರಿ . ಸಮಾಜದಲ್ಲಿ ಜನನೀ ಮಾತೃಸ್ವರೂಪಳಾದ ಸ್ತ್ರೀಯ ಮಾನ ಪ್ರಾಣಗಳ ರಕ್ಷಣೆ ಮತ್ತು ಜನ್ಮಭೂಮಿಯ ರಕ್ಷಣೆಗಾಗಿ ಯಾವ ಹೊತ್ತಲ್ಲೂ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂಬ ಸಂದೇಶವನ್ನು ಜಟಾಯು ಪ್ರಸಂಗವನ್ನೂ ಸೇರಿದಂತೆ ಇಡೀ ರಾಮಾಯಣ ನಮಗೆ ತಿಳಿಸಿಕೊಡುತ್ತದೆ . ಜಟಾಯು ಮೋಕ್ಷ ಪಡೆದ ಪವಿತ್ರ ಬೆಟ್ಟಕ್ಕೆ ಪಾವಟಿಗೆಗಳನ್ನು ನಿರ್ಮಿಸುವುದೆಂದರೆ ಅನನ್ಯ ರಾಮಭಕ್ತಿ ಮತ್ತು ಸೀತಾಮಾತೆಯ ರಕ್ಷಣೆಗಾಗಿ ಪ್ರಾಣತೆತ್ತ ಜಟಾಯುವಿನ ಎತ್ತರಕ್ಕೆ ನಮ್ಮನ್ನು ನಾವು ಎತ್ತರಿಸಿಕೊಳ್ಳುವುದೆಂದು ಭಾವಿಸಬೇಕು ಎಂದರು .

ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್
ಮಾತಾ ಅಂಜನಾಂಬಾ ನಿಷ್ಠ , ಜಟಾಯು ರಾಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಯಕುಮಾರ್ ಕಾರ್ಯದರ್ಶಿ ಹಾಗೂ ಮಿಜೋರಾಮ್ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ , ಸ್ವಾಮಿ ಶಂಕರಾನಂದ ಮಯಿ‌, ರಾಮಚಂದ್ರ ಅಡಿಗ ಶಿಲ್ಪಿ ಬಾಲು , ತಂತ್ರಿ ಸತೀಶ ಭಟ್ಟರಿಪ್ಪಾದ್ ,ರಾಜಶೇಖರನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply