ರಾಕ್ ಕನ್ನಡ ಸಂಘ ಯು ಎ ಇ – ರಕ್ತ ದಾನ ಶಿಬಿರ

ರಾಕ್ ಕನ್ನಡ ಸಂಘ, ರಾಸ್ ಅಲ್ ಖೈಮಾ,ಯು ಎ ಇ., ಎಮಿರೇಟ್ಸ್ ಹೆಲ್ತ್ ಸರ್ವೀಸಸ್ ಮತ್ತು ರಾಕ್ ಮಾಲ್ ಇದರ ಸಹಬಾಗಿತ್ವದಲ್ಲಿ ರಕ್ತ ದಾನವು ಜೂ.22 ರಂದು ರಾಕ್ ಮಾಲ್ ನ ಪಾರ್ಕಿಂಗ್ ನಲ್ಲಿ ಮೊಬೈಲ್ ಬ್ಲಡ್ ಬ್ಯಾಂಕ್ ನಲ್ಲಿ ನೆರವೇರಿತು. ಸುಮಾರು ಮೂರು ಘಂಟೆಗಳ ಅವಧಿಯಲ್ಲಿ 80 ಮಂದಿ ಆಸಕ್ತರು ಭಾಗವಹಿಸಿದ್ದರು. ಅವರಲ್ಲಿ ಅರ್ಹ 44 ದಾನಿಗಳಿಂದ 43 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಎಂದು ರಾಕ್ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಕುಮಾರ್ ಭಟ್ ಅವರು ತಿಳಿಸಿದ್ದಾರೆ.

ರಕ್ತ ದಾನ ಮಾಡಿದ ಎಲ್ಲರಿಗೂ ರಾಕ್ ಕನ್ನಡ ಸಂಘದ ಪರವಾಗಿ ಅಧ್ಯಕ್ಷರಾದ ಡಾ.ಕುಮಾರ್ ಭಟ್ ಮತ್ತು ಪದಾಧಿಕಾರಿಗಳಾದ ಡಾ. ಲೇಖ, ಶ್ರೀ ಸಂತೋಷ್ ಹೆಗ್ಡೆ, ಶ್ರೀ ಜೋನ್, ಶ್ರೀ ರಮೇಶ್ ಮತ್ತು ಶ್ರೀಮತಿ ದೀಪರವರು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply