ಚಿಕಾಗೋದ ವಿದ್ಯಾರಣ್ಯ ಕನ್ನಡ ಕೂಟದ ಸುವರ್ಣೋತ್ಸವ

ಕನ್ನಡಿಗನಾದ ಹನುಮನು ವಿಶ್ವಪೂಜ್ಯನಾದ್ದರಿಂದ ಕನ್ನಡ ಭಾಷೆಯು ವಿಶ್ವವಂದ್ಯವಾಗಿದೆ, ಮಧ್ವ ಪುರಂದರ ಬಸವರಾಯರ ನೆಲೆವೀಡಾದ ಕರ್ನಾಟಕ ವಿಶ್ವದಲ್ಲೇ ವಿಶಿಷ್ಟವಾಗಿದೆ, ಈ ದೃಷ್ಟಿಯಲ್ಲಿ ಕನ್ನಡ ಸನ್ನಡತೆಯ ಕನ್ನಡಿಯಾಗಿದೆ ಎಂದು ಶ್ರೀ ಪು ತ್ತಿ ಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸುತ್ತೂರು ಮಠಾಧೀಶರೊಂದಿಗೆ ಚಿಕಾಗೋದ ವಿದ್ಯಾರಣ್ಯ ಕನ್ನಡ ಕೂಟದ ಸುವರ್ಣೋತ್ಸವವನ್ನು ಉಧ್ಘಾಟಿಸುತ್ತಾ ನುಡಿದರು

ಕನ್ನಡಿಗರ ಆರಾಧ್ಯ ದೇವರಾದ ಉಡುಪಿಯ ಮುದ್ದು ಕೃಷ್ಣನ ವೇಷಧಾರಿಗಳಾದ ಚಿಣ್ಣರೊಂದಿಗೆ ಕನ್ನಡದ ಕಣ್ಮಣಿಗಳಾದ ಒನಕೆ ಓಬವ್ವ, ಸಂಗಣ್ಣರಾಯ ಮೊದಲಾದ ವೇಷಧಾರಿಗಳಾದ ಪುಟಾಣಿಗಳೊಂದಿಗೆ ಚಂಡೆ, ಯಕ್ಷಗಾನ ವೀರಗಾಸೆಗಳೊಂದಿಗೆ ಪಾಲಕಿಯಲ್ಲಿ ಕನ್ನಡಾಂಬೆಯ ಮೆರವಣಿಗೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಭಾರತದ ಹಾಗೂ ಅಮೇರಿಕಾದ ರಾಷ್ಟ್ರಗೀತೆಯೊಂದಿಗೆ ನಡೆದ ಸಮಾರಂಭದಲ್ಲಿ ಪ್ರಸಿದ್ಧ ಸಂಗೀತಗಾರ ರಾಜೇಶ್ ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಮಾರಂಭದಲ್ಲಿ ಕರ್ನಾಟಕದ ಪ್ರತಿರೂಪ ಮೂಡಿ ಬಂದಿತು.

 
 
 
 
 
 
 
 
 
 
 

Leave a Reply