ವಿಮಾನ ಪತನವಾದ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ ನಾಲ್ಕು ಮಕ್ಕಳು!

ವಿಮಾನ ಪಥನವಾದ 40 ದಿನಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಕೊಲಂಬಿಯಾದ ಸೇನಾ ಪಡೆ ಮಾಹಿತಿ ನೀಡಿದೆ.

ನೀ ಒಂದರಂದು ಏಳು ಪ್ರಯಾಣಿಕರು ಹಾಗೂ ಒಬ್ಬ ಪೈಲೆಟ್ ಇತ್ತ ಸಸ್ನ ಸಿಂಗಲ್ ಇಂಜಿನ್ನ ಸಣ್ಣ ವಿಮಾನ ಒಂದು ಎಂಜಿನ್ ವೈಫಲ್ಯದಿಂದ ಪತನವಾಗಿದ್ದು ಘಟನೆಯ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಲಾಗಿತ್ತು. ಅಪಘಾತವಾದ ಬರೋಬ್ಬರಿ ಎರಡು ವಾರಗಳ ನಂತರ ಪತನವಾದ ವಿಮಾನವನ್ನು ಅಮೆಜಾನ್ ದಟ್ಟ ಕಾಡಿನಲ್ಲಿ ಕಂಡುಹಿಡಿಯಲಾಗಿದ್ದು ಏಳು ಪ್ರಯಾಣಿಕರ ಪೈಕಿ ಮೂವರ ಮೃತ ದೇಹಗಳನ್ನು ವಶಪಡಿಸಿಕೊಂಡಿದ್ದರು.

ಆದರೆ ನಾಲ್ಕು ಮಕ್ಕಳು ಮಾತ್ರ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು ಹೀಗಾಗಿ ಬದುಕಿರುವ ಸಾಧ್ಯತೆ ಹೆಚ್ಚಿದೆ ಎಂದು ಹುಡುಕಾಟವನ್ನು ತೀವ್ರಗೊಳಿಸಲಾಯಿತು.

ನಾಯಿಗಳು ಸೇರಿದಂತೆ 150 ಸೈನಿಕರು ಮಕ್ಕಳನ್ನು ಪತ್ತೆಹಚ್ಚಲು ಹುಡುಕಾಟ ನಡೆಸಿದ್ದು 40 ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply