ಉಡುಪಿ: ತ್ಯಾಜವನ್ನು ಎಸೆಯುವುದನ್ನು ನಿರ್ಬಂಧಿಸಲು ನಾಗರೀಕರ ಪರವಾಗಿ ಮನವಿ

ಉಡುಪಿ : ಜಿಲ್ಲೆಯ ಜನರ ಅನೂಕೂಲತೆಯ ದೃಷ್ಟಿಯಿಂದ ರೂ. 29.81 ಕೋಟಿ ವೆಚ್ಚದಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜನರು ಅಜಾಕರೂಕತೆಯಿಂದ ಕಸ / ಇತ್ಯಾದಿ ತ್ಯಾಜವನ್ನು ಎಸೆಯುವುದನ್ನು ನಿರ್ಬಂಧಿಸಲು ಬಸ್ ನಿಲ್ದಾಣದಲ್ಲಿ ದಿನದ 24 ಗಂಟೆಯೂ ( ಕನಿಷ್ಟ ಪಕ್ಷ ದಿನದ 12 ಗಂಟೆಯಾದರೂ ) ಕಾರ್ಯಾಚರಿಸಲು 02 ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು / 02 ಪ್ರಮಾಣಿಕ ಸ್ವಯಂ ಸೇವಕರನ್ನು ನಿಯೋಜಿಸುವಂತೆ ಕೋರಿ ಹಾಗೂ ಜನರು ಎಲ್ಲೆಂದರಲ್ಲಿ ತಿಂಡಿ – ತಿನಿಸುಗಳ ಪೊಟ್ಟಣವನ್ನು ಜನರು ಎಸೆಯದಂತೆ ನೋಡಿಕೊಳ್ಳಲು ಆ ಬಸ್ ನಿಲ್ದಾಣದ ಕಟ್ಟಡದಲ್ಲಿ ವ್ಯಾಪಾರ ನಡೆಸುವ ಅಂಗಡಿಗಳ ಮಾಲಕರಿಗೆ ಈ ಬಗ್ಗೆ ಜಾಗರೂಕತೆಯನ್ನು ಮೂಡಿಸಲು ಮನವಿ ಸಲ್ಲಿಸಲಾಯಿತು.

ಅವರ ವ್ಯಾಪ್ತಿಯಲ್ಲಿ , ಆಯಾ ಅಂಗಡಿಗಳಿಂದ ಮಾರಾಟವಾಗುವ ತಿಂಡಿ- ತಿನಿಸುಗಳ ಪೊಟ್ಟಣಕ್ಕೆ ಸಂಬಂಧಿಸಿ ಆಯಾ ಅಂಗಡಿಗಳ ಮಾಲಕರನೇ ಜವಬ್ದಾರರನ್ನಾಗಿಮಾಡಿಸುವ ನಿಟ್ಟಿನಲ್ಲಿ ಆಮೂಲಕ ಜಿಲ್ಲೆಯಲ್ಲಿ ಕಾರ್ಯಾರಂಭವಾಗಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಸಚ್ಚ, ಸುಂದರ, ಹಾಗೂ ರಾಜ್ಯದ ಇತರ ಜಿಲ್ಲೆಗಳ ಬಸ್ ( ಸರ್ಕಾರಿ ಹಾಗೂ ಖಾಸಗಿ ) ನಿಲ್ದಾಣಗಳಿಗೆ ಮಾದರಿಯಾಗಿಸುವ ಆಶಾದಾಯಕ ಭಾವನೆಯೊಂದಿಗೆ ಸಹಕಾರ ಹಾಗೂ ಕಾಳಜಿಯುತ ಅಗತ್ಯ ಕ್ರಮಕ್ಕಾಗಿ ಮಾನ್ಯ ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರಿಗೆ ಜಿಲ್ಲೆಯ ನಾಗರೀಕರ ಪರವಾಗಿ ಕಾಲೇಜು ವಿದ್ಯಾರ್ಥಿಗಳಾದ ರಾಯನ್ ಫೆರ್ನಾಂಡಿಸ್, ರಾಘವೇಂದ್ರ ರಾವ್, ಪ್ರದೀಶ್ ಮತ್ತಿತ್ತರು ಮನವಿ ಸಲ್ಲಿಸಿದರು.

 
 
 
 
 
 
 
 
 
 
 

Leave a Reply