ಸಂಘಟಿತ ಹೋರಾಟಕ್ಕೆ ಸಿಕ್ಕ ವಿಜಯ – ಕೊಡವೂರು

ಉಡುಪಿ ಜಿಲ್ಲೆಯ ಪ್ರತಿಷ್ಠಿತ ಎಪಿಎಂಸಿ( ಕೃಷಿ ಉತ್ಪನ್ನ ಮಾರುಕಟ್ಟೆ) ಉಡುಪಿ ಜಿಲ್ಲೆಯ ಕೃಷಿಕರು ಬೆಳೆದಂತಹ ಬೆಳೆಗಳನ್ನು ಮಾರಾಟ ಮಾಡುವಂತಹ ಕೇಂದ್ರ. ಈ ಕೇಂದ್ರ ಉತ್ತಮ ರೀತಿಯಾಗಿ ನಡೆಯುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿತ್ತು ಆದರೆ ಕಳೆದ ಕಳೆದ ಐದಾರು ವರ್ಷಗಳಿಂದ ಎಪಿಎಂಸಿಯಲ್ಲಿ ಕೃಷಿಕರಿಗೆ ಮತ್ತು ವರ್ತಕರಿಗೆ ಮಾರಾಟ ಮಾಡುವಂತಹ ವ್ಯವಸ್ಥೆ ಕಂಡುಬರುತ್ತಿಲ್ಲ ಅಧಿಕಾರಿಗಳ ದಬ್ಬಾಳಿಕೆ ಅಧಿಕಾರಿಗಳ ನಡತೆ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಎದ್ದು ಕಾಣುತ್ತಿತ್ತು. ಕೇವಲ ಕ್ಯಾನ್ಸರ್ ಪೀಡಿತ ಆಗಿರುವ ಒಬ್ಬ ವರ್ತಕ 250 ರೂಪಾಯಿಯ ಚಿಲ್ಲರೆ ಲೈಸೆನ್ಸ್ ಗೆ 40,000 ಪಾವತಿ ಮಾಡಿರುವಂತದ್ದು ಬೆಳಕಿಗೆ ಬಂದಿದೆ. ಅದರ ಜೊತೆಯಲ್ಲಿ ಮರಣ ಹೊಂದಿ 3 ವರ್ಷ 1 ತಿಂಗಳಾದರೂ ಅವರು ಪ್ರತಿ ತಿಂಗಳು ಬಂದು ತನ್ನ ಬಾಡಿಗೆ ಕೋಣೆಗೆ ಬಾಡಿಗೆ ಕಟ್ಟಿರುವ ಸಂಗತಿ ಎಡಿಸಿಯ ಕುಂದು ಕೊರತೆಯಲ್ಲಿ ಘಟನೆ ಬೆಳಕಿಗೆ ಬಂದಾಗ ಅಲ್ಲೊಂದು ಎಪಿಎಂಸಿ ರಕ್ಷಣಾ ಸಮಿತಿಯನ್ನು ಮಾಡಿಕೊಂಡು ಊರಿನ ಜನತೆ ಮತ್ತು ಮತ್ತು ವರ್ತಕರು ಕೃಷಿಕರು ಸೇರಿಕೊಂಡು ಹೋರಾಟವನ್ನು ಪ್ರಾರಂಭ ಮಾಡಿದರು. ಈ ಹೋರಾಟಕ್ಕೆ ಅನೇಕ ಮನವಿಗಳನ್ನು ಎಸಿ, ಡಿಸಿ, ಎಂಪಿ, ಎಂಎಲ್ಎ, ಸಚಿವರಿಗೆ ನೀಡಲಾಯಿತು. ಅನೇಕ ಪ್ರತಿಭಟನೆ ಹೋರಾಟ ಮಾಡಲಾಯಿತು. ಕೊನೆಗೆ ಅಹೋರಾತ್ರಿ ಧರಣಿ ಮೂಲಕ ಹೊರರವನ್ನು ಮಾಡಲು ಚಾಲನೆ ಕೊಟ್ಟಾಗ ಅಧಿಕಾರಿಗಳು ಮತ್ತು ಮಾನ್ಯ ಶಾಸಕರು ಬಂದು ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅಂತಹ ಅಧಿಕಾರಿ ನನ್ನ ಕ್ಷೇತ್ರಕ್ಕೆ ಅವಶ್ಯಕತೆ ಇಲ್ಲ ಅಂತವರನ್ನು ನಾನು ಕಿತ್ತೊಗಿದ್ದೇನೆ ಅನ್ನುವ ಮುಖಾಂತರ ಅವರನ್ನು ಅಮಾನತ್ತು ಮಾಡುವ ಮುಖಾಂತರ ಈ ಒಂದು ಹೋರಾಟಕ್ಕೆ ಜಯ ಸಿಕ್ಕಿದೆ ಆದ್ದರಿಂದ ಇಂತಹ ಭ್ರಷ್ಟಾಚಾರದ ವಿರುದ್ಧ ಕೇವಲ ನಮ್ಮ ಭಾಷಣ ಮಾತ್ರವಾಗದೆ ಎಲ್ಲಾ ಜನ ಪ್ರತಿನಿಧಿಗಳು ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ನಾವು ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯತೆ ಇದೆ. ಎಪಿಎಂಸಿ ಅಧ್ಯಕ್ಷರ ಆಗಿರುವಂತಹ ವಿಜಯ್ ಕೊಡುವೂರು ಇವರ ಸಂಘಟಿತ ಹೋರಾಟಕ್ಕೆ ಹಾಗೂ ಕೃಷಿಕರು ವರ್ತಕರು ಊರಿನ ನಾಗರಿಕರ ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಇದು ಹೋರಾಟಕ್ಕೆ ಜಯ ಸಿಕ್ಕಿದೆ ಆದ್ದರಿಂದ ಇನ್ನಾದರೂ ಈ ಭ್ರಷ್ಟಾಚಾರ ನಿಲ್ಲುವಂತಾಗಲಿ, ಭ್ರಷ್ಟಾಚಾರ ಕಡಿವಾಣಕ್ಕೆ ಬರಲಿ ಎಂದು ನಾಗರಿಕರು ನಿಟ್ಟುಸಿರು ಬಿಟ್ಟಿರುವುದು ದಿನಾಂಕ 29-11-2023 ನೆಯ ವರ್ಷದಲ್ಲಿ ಬುಧವಾರ ಬೆಳಗ್ಗೆ ನಡೆದ ಅಹೋರಾತ್ರಿ ಧರಣಿಯ ಮಧ್ಯದಲ್ಲಿ ಬಂದು ಶಾಸಕರು ಭ್ರಷ್ಟ ಅಧಿಕಾರಿಯನ್ನು ಅಮಾನತು ಮಾಡಿದ ವಿಚಾರವನ್ನು ತಿಳಿಸಿದಾಗ ಎಲ್ಲರಿಗೂ ಸಂಭ್ರಮವಾಗಿದೆ ಇನ್ನು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಪಡೆಯುತ್ತೇವೆ.

ಎಪಿಎಂಸಿ ವರ್ತಕರ, ಕೃಷಿಕರು, ನಾಗರಿಕರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಇನ್ನು ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳು ಬಂದರೆ ಕಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಭ್ರಷ್ಟಾಚಾರ ಉಗ್ರಗಾಮಿಗೆ ಸರಿ ಎಂದು ವಿಜಯ್ ಕೊಡವೂರು ತಿಳಿಸಿದರು.

 
 
 
 
 
 
 
 
 
 
 

Leave a Reply