ವಿ-ರಾಕ್ಸ್ ಡ್ಯಾನ್ಸ್ ಕಂಪನಿಯ ಎರಡನೇ ಶಾಖೆ ಸೈಬ್ರಕಟ್ಟೆಯಲ್ಲಿ ಪ್ರಾರಂಭ

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಪ್ರಖ್ಯಾತ ನೃತ್ಯ ತಂಡವಾದ ವಿ-ರಾಕ್ಸ್ ಡ್ಯಾನ್ಸ್ ಕಂಪನಿಯು ತನ್ನ ಎರಡನೇ ಶಾಖೆಯನ್ನು ಸೈಬ್ರಕಟ್ಟೆಯಲ್ಲಿ ಪ್ರಾರಂಭಿಸಿದೆ. ಈ ಶಾಖೆಯ ಉದ್ಘಾಟನೆಯನ್ನು ವಿ-ರಾಕ್ಸ್ ತಂಡದ ವಿದ್ಯಾರ್ಥಿಗಳೇ ನೆರವೇರಿಸಿದರು.

ವಿ-ರಾಕ್ಸ್ ಡ್ಯಾನ್ಸ್ ಕಂಪನಿಯ ಸಂಸ್ಥಾಪಕರಾದ ವಸಂತ್ ನಾಯ್ಕ್ ರವರು ಹಾಗೂ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ 1500ಕ್ಕೂ ಅಧಿಕ ಸ್ಟೇಜ್ ಷೋ ಗಳನ್ನು ನೀಡಿದ ಕೃತಿ ಆರ್ ಸನಿಲ್ ರವರು ನೃತ್ಯ ತರಬೇತಿಯನ್ನು ನೀಡಲಿದ್ದಾರೆ.

ಸೈಬ್ರಕಟ್ಟೆಯ ಕೆ ಆರ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ವಿ ರಾಕ್ಸ್ ಡ್ಯಾನ್ಸ್ ಕಂಪನಿಯ ನೃತ್ಯ ತರಗತಿಗಳು ಪ್ರಾರಂಭವಾಗಿದೆ. ಬಾಲಿವುಡ್, ಸೆಮಿ-ಕ್ಲಾಸಿಕಲ್, ಹಿಪ್-ಹಾಪ್, ಕಾಂಟೆಂಪರರಿ, ಸಾಲ್ಸಾ ಹೀಗೆ ಹಲವಾರು ಶೈಲಿಯ ನೃತ್ಯ ತರಬೇತಿಯನ್ನು ಇಲ್ಲಿ ಹೇಳಿಕೊಡಲಾಗುವುದು.

ಮೂರು ವರುಷದಿಂದ ಪ್ರಾರಂಭಿಸಿ ಎಲ್ಲಾ ವಯೋಮಿತಿಯವರಿಗೂ ಇಲ್ಲಿ ನೃತ್ಯ ತರಬೇತಿಯನ್ನು ನೀಡಲಾಗುವುದು. ಸೈಬ್ರಕಟ್ಟೆಯ ವಿ-ರಾಕ್ಸ್ ಶಾಖೆಯಲ್ಲಿ ಶನಿವಾರ ಮತ್ತು ಭಾನುವಾರ 2:30 ರಿಂದ 3:30ರ ವರೆಗೆ ನೃತ್ಯ ತರಬೇತಿಯನ್ನು ಹೇಳಿಕೊಡಲಾಗುವುದು. ಹಾಗೂ ಬ್ರಹ್ಮಗಿರಿಯ ಶಾಖೆಯಲ್ಲಿ ಶನಿವಾರ ಸಂಜೆ 6:30-7:30 ಹಾಗೂ ಭಾನುವಾರ ಬೆಳಗ್ಗೆ 9:30-10:30 ನೃತ್ಯ ತರಬೇತಿಯನ್ನು ಹೇಳಿಕೊಡಲಾಗುವುದು. ನೃತ್ಯ ಮತ್ತು ಫಿಟ್ನೆಸ್ ಕಲಿಯಲು ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ 9538525009, 9964895760 ಸಂಪರ್ಕಿಸಿ.

 
 
 
 
 
 
 
 
 
 
 

Leave a Reply