ಪೂರ್ಣಪ್ರಜ್ಞ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟನೆ

ಪೂರ್ಣಪ್ರಜ್ಞ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟನೆ ಮತ್ತು ಓರಿಯೆಂಟೇಷನ್ ಕಾರ್ಯಕ್ರಮ ಯುವ ರೆಡ್ ಕ್ರಾಸ್ ನ ಉಗಮ ಮತ್ತು ಹೆನ್ರಿ ಡೊನಾಲ್ಟ್ ರವರ ಜೀವನ ಚರಿತ್ರೆ, ಜಿನೇವಾ ಒಪ್ಪಂಧ, ರೆಡ್ ಕ್ರಾಸ್ ಅಂತರರಾಷ್ಟ್ರೀಯ ಸಂಘಟನೆಗಳು, ಹಾಗೂ ರೆಡ್‌ ಕ್ರಾಸ್‌ನ ಮೂಲ ತತ್ವಗಳು. ರೆಡ್ ಕ್ರಾಸ್ ಲಾಂಛನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಮತ್ತುಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿಯ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಗೌರವ ಕಾರ್ಯದರ್ಶಿ ಡಾ ಗಣನಾಥ ಶೆಟ್ಟಿ ಎಕ್ಕಾರು ರವರು ಪೂರ್ಣಪ್ರಜ್ಞ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷೆಯನ್ನು ಪ್ರಾಂಶುಪಾಲರಾದ ಡಾ. ರಾಮು . ಎಲ್ ರವರು ವಹಿಸಿ ವಿದ್ಯಾರ್ಥಿಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ದೇಶಗಳು ಮತ್ತು ಜವಬ್ದಾರಿಗಳ ಬಗ್ಗೆ ತಿಳಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾದಿಕಾರಿ ಡಾ. ರಂಗಸ್ವಾಮಿ ಜೆ ಮತ್ತು ಉಪ ಕಾರ್ಯಕ್ರಮ ಅಧಿಕಾರಿ ಕು. ಅನುಷಾ ಉಪಸ್ಥಿತರಿದ್ದರು. ಯೂಥ್ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರಾದ ಶ್ರೀದೇವಿ ಮತ್ತು ಶ್ರಾವ್ಯ ಸ್ವಾಗತಿಸಿದರು, ಅರ್ಪಿತಾ ನಿರೂಪಿಸಿದರು, ವರ್ಷಿಣಿ ವಂದಿಸಿದರು.

 
 
 
 
 
 
 
 
 
 
 

Leave a Reply