ಪೂರ್ಣಪ್ರಜ್ಞ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ರಾಮು ಎಲ್.

ಪೂರ್ಣಪ್ರಜ್ಞ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಭೌತಶಾಸ್ತ್ರ ವಿಭಾಗದ ಡಾ. ರಾಮು ಎಲ್. ಅವರು ಸೆಪ್ಟೆಂಬರ್ ೧೧, ೨೦೨೩, ಸೋಮವಾರದoದು ಅಧಿಕಾರ ವಹಿಸಿಕೊಂಡರು. ಶ್ರೀ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ನಿರ್ಣಯದಂತೆ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಡಾ. ಜಿ. ಎಸ್. ಚಂದ್ರಶೇಖರ್, ಖಜಾಂಚಿ ಸಿ.ಎ. ಪ್ರಶಾಂತ್‌ಹೊಳ್ಳ, ಗೌರವ ಆಡಳಿತಾಧಿಕಾರಿಗಳಾದ ಡಾ. ಎ.ಪಿ. ಭಟ್, ಮಾಜಿ ಪ್ರಾಂಶುಪಾಲ ಡಾ. ರಾಘವೇಂದ್ರ ಎ, ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಬಿ. ಎಸ್. ಶೇರಿಗಾರ್, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ನಿರ್ದೇಶಕ ಪ್ರೊ. ಎಂ. ಆರ್. ಹೆಗಡೆ ಇವರ ಸಮ್ಮುಖದಲ್ಲಿ ಡಾ. ರಾಮು ಎಲ್. ಇವರಿಗೆ ಕಾಲೇಜಿನ ಪ್ರಾಂಶುಪಾಲರ ಅಧಿಕಾರವನ್ನು
ಹಸ್ತಾಂತರಿಸಲಾಯಿತು.
ಡಾ. ರಾಮು ಎಲ್. ಪೂರ್ಣಪ್ರಜ್ಞ ಕಾಲೇಜಿಗೆ ಜುಲೈ ೨೦೨೧ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು. ಅವರು ಸುಮಾರು ೧೫ ವರ್ಷಗಳ ಬೋಧನಾ
ಅನುಭವವನ್ನು ಹೊಂದಿದ್ದು, ಸರಕಾರ ಪ್ರಥಮ ದರ್ಜೆ ಕಾಲೇಜು ಕೋಲಾರ ಗೋಲ್ಡ್ ಫೀಲ್ಡ್ಸ್, ಬೆಂಗಳೂರಿನ ಎಂ.ಇ.ಎಸ್. ಪದವಿ ಕಾಲೇಜು ಮತ್ತು ಎಂ.ಇ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಅವರು ೧೧ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
ಡಾ. ರಾಮು ಎಲ್. ಒಬ್ಬ ಸಮರ್ಥ ಆಡಳಿತಗಾರ ಮತ್ತು ಒಬ್ಬ ನಿಪುಣ ಶಿಕ್ಷಣತಜ್ಞರಾಗಿದ್ದು, ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್, ಥಿನ್ ಫಿಲ್ಮ್ಸ್ ಮತ್ತು ಬಯೋ-ಫಿಸಿಕ್ಸ್ನ ಡೊಮೇನ್‌ಗಳಲ್ಲಿನ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ೨೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು ಭೌತಶಾಸ್ತ್ರದಲ್ಲಿ ೫ ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಅವರು ತಮ್ಮ ಎಂ.ಎಸ್ಸಿ. ಪದವಿಯನ್ನು ೧೯೯೯ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ನoತರ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ನಿರ್ವಹಿಸಿ ೨೦೦೯ರಲ್ಲಿ ಪಿ.ಹೆಚ್.ಡಿ.
ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಅವರು ತಮ್ಮ ಬಿ.ಎಡ್. ಪದವಿಯನ್ನು IಉಓಔU ದಿಂದ ಹಾಗೂ ಎಂ.ಬಿ.ಎ. (ಎನರ್ಜಿ ಮ್ಯಾನೇಜ್ಮೆಂಟ್) ಪದವಿಯನ್ನು ಜೈಪುರ ರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.
ಅವರು ಜಪಾನ್, ತೈವಾನ್, ಶ್ರೀಲಂಕಾ, ಮಲೇಶಿಯಾ ಮತ್ತು ಚೀನಾದಂತಹ ವಿವಿಧ ದೇಶಗಳಿಗೆ ಸಂಶೋಧನೆಗಾಗಿ ವ್ಯಾಪಕವಾಗಿ ಪ್ರಯಾಣಿಸಿದ್ದಾರೆ.
 
 
 
 
 
 
 
 
 
 
 

Leave a Reply