ಬೈಂದೂರು ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ.

ಬೈಂದೂರು ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆಯು ಶ್ರೀ ಮಹಾಕಾಳಿ
ದೇವಸ್ಥಾನದಲ್ಲಿ ನಡೆಯಿತು. ಶುಭದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ,ಕಿರಿ ಮಂಜೇಶ್ವರ ಇದರ ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಅನಿತಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ’60ರ ವಯಸ್ಸಿನ ನಂತರ ಮನುಷ್ಯನ ಬದುಕು ದೈಹಿಕ ಮತ್ತು ಮಾನಸಿಕವಾಗಿ ಬದಲಾಗುವುದು ವಯೋ ಸಹಜವಾಗಿದೆ. ಕಾಲಘಟ್ಟಕ್ಕೆ ತಕ್ಕಂತೆ ಹಿರಿಯರು ತಮ್ಮ ಪ್ರವರ್ತಿಗಳನ್ನು ಬದಲಾಯಿಸಿಕೊಳ್ಳುತ್ತಾ , ಕಿರಿಯರಿಗೆ ತಮ್ಮ ಅನುಭವದಿಂದ ಮಾರ್ಗದರ್ಶಕರಾಗಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟು ಅದನ್ನು ರೂಡಿಸಿಕೊಳ್ಳುವರೇ ಪ್ರೇರೇಪಿಸಿದರೆ ಭವಿಷ್ಯತ್ತಿನಲ್ಲಿ ಉತ್ತಮ ನಾಗರೀಕ ಸಮಾಜದ ರಚನೆ ಯಾಗುತ್ತದೆ ಹಾಗೂ ಇದು ಹಿರಿಯರ ಕರ್ತವ್ಯ ಕೂಡ ಹೌದು’ ಎಂಬುದಾಗಿ ಕರೆ ಕೊಟ್ಟರು. ವೇದಿಕೆಯಲ್ಲಿ ಬೈಂದೂರು ಇನ್ನರವೀಲ್ ಕಬ್ಬಿನ ಅಧ್ಯಕ್ಷೆ ಶ್ರೀಮತಿ ಭಾನುಮತಿ, ವೇದಿಕೆಯ ಉಪಾಧ್ಯಕ್ಷ ಎ. ಶ್ರೀನಿವಾಸರವರು ಉಪಸ್ಥಿತರಿದ್ದರು . ಕಾರ್ಯದರ್ಶಿ ಸಂಜೀವ್ ಆಚಾರ್ ಗತ ತಿಂಗಳ ವರದಿ ವಾಚಿಸಿ,ಶ್ರೀಮತಿ ಶಾರದಾ ಪ್ರಾರ್ಥಿಸಿದರು. ಎಂ .ಎನ್. ಶೇರುಗಾರ್ ಅವರು ವಂದಿಸಿದರು .

ಪೋಟೊ : ಕೆ.ಪುಂಡಲೀಕ ನಾಯಕ್, ನಾಯ್ಕನಕಟ್ಟೆ

 
 
 
 
 
 
 
 
 
 
 

Leave a Reply