ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ

ಉಡುಪಿ: ಯಶಸ್ ಪ್ರಕಾಶನ ಕಟಪಾಡಿ, ತುಳುಕೂಟ ಉಡುಪಿ(ರಿ.), ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು ವತಿಯಿಂದ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದ ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ  ಕಾರ್ಯಕ್ರಮ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್ ಹಾಲ್‌ನಲ್ಲಿ ನಡೆಯಿತು.   

ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್ ಸಂಸ್ಥೆಯ ಮಾಲಕರಾದ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದ್ದು, ಮಕ್ಕಳ ಮತ್ತು ಹೆತ್ತವರ ನಡುವಿನ ಸಂಬoಧಗಳು ದೂರವಾಗುತ್ತಿದ್ದು, ಕುಟುಂಬವನ್ನು ಜೋಡಿಸುವ ವ್ಯವಸ್ಥೆಯನ್ನು ವಿದ್ಯಾವಂತರಾದ ನಾವು ಮಾಡಬೇಕಾದುದು ಅನಿವಾರ್ಯ ಎಂದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುವಜನಾಂಗ ಕೂಡು ಕುಟುಂಬ ಬಿಟ್ಟು ಏಕ ಕುಟುಂಬ ಪದ್ಧತಿಯತ್ತ ಮನಸ್ಸು ಮಾಡುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಅಪ್ಪೆಮ್ಮೆ ನಾಟಕ ಹೆತ್ತವರನ್ನು ಬೀದಿಗೆ ಅಟ್ಟಬೇಡಿ ಎಂಬ ಸಂದೇಶ ಸಾರುತ್ತದೆ ಎಂದರು.  ಉಡುಪಿಯ ಸಮಾಜ ಸೇವಕರಾದ ಉಡುಪಿ ವಿಶ್ವನಾಥ ಶೆಣೈ ಮತ್ತು ಪ್ರಭಾವತಿ ದಂಪತಿಗಳು ಪುಸ್ತಕ ಬಿಡುಗಡೆ ಮಾಡಿದರು.

ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವಿ.ಕೆ.ಯಾದವ್ ಕೃತಿ ಪರಿಚಯ ಮಾಡಿ, ವೃದ್ಧಾಶ್ರಮದೊಳಗೆ ನಡೆಯುವ ಸಾಮಾಜಿಕ ಕಥೆಯನ್ನು ನವ್ಯ ನಾಟಕ ಶೈಲಿಯಲ್ಲಿ, ಪರದೆ ನಾಟಕ ಶೈಲಿಯಲ್ಲಿ, ಪ್ರಹಸನ, ರೂಪಕದ ಶೈಲಿಯಲ್ಲಿ ನಾಟಕವನ್ನು ಪ್ರದರ್ಶಿಸಲು ಅನುಕೂಲ ವಾಗುವಂತೆ ಅಪ್ಪೆಮ್ಮೆ ನಾಟಕವನ್ನು ಪ್ರಕಾಶ್ ಸುವರ್ಣ ಅವರು ಸರಳವಾಗಿ ನಿರೂಪಿಸಿದ್ದಾರೆ ಎಂದರು.
ಉಡುಪಿಯ ಉದ್ಯಮಿ ಮನೋಹರ್ ಶೆಟ್ಟಿ,  ಪಾಂಗಾಳಗುಡ್ಡೆ ಗರಡಿಮನೆ ಸುಧಾಕರ್ ಡಿ.ಅಮೀನ್, ಮತ್ಯೋಧ್ಯಮಿಗಳಾದ ಹರೀಶ್ ಶ್ರೀಯಾನ್ ಮಲ್ಪೆ, ಉಡುಪಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ಯಶಸ್ ಪ್ರಕಾಶನ ಸಂಸ್ಥೆಯ ಮುಖ್ಯಸ್ಥೆ ಪ್ರೀತಿ ಪ್ರಕಾಶ ಸುವರ್ಣ ಕಟಪಾಡಿ, ಸುಂದರಿ ಸುವರ್ಣ, ಇಂದಿರಾ ವಿ.ಕಾಂಚನ್, ನಾರಾಯಣ ಸಾಲ್ಯಾನ್,ನವಮಿ ಸುವರ್ಣ ಉಪಸ್ಥಿತ ರಿದ್ದರು. ಇದೇ ವೇಳೆ ಸಮಾಜಸೇವಕರಾದ ಲೀಲಾಧರ್ ಶೆಟ್ಟಿ ಕರಂದಾಡಿ ಹಾಗೂ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
 
 
 
 
 
 
 
 
 
 
 

Leave a Reply