ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭ ಸಮಿತಿ ಸಭೆ

ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಸಮಿತಿ ಸಭೆಯು ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಆದಿತ್ಯವಾರ ದಿನಾಂಕ 15 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಪ್ರೊ.ತುಕಾರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ .ಗೌರವಾನ್ವಿತ ಡಾ||ಅಮ್ಮೆಂಬಳ ಬಾಳಪ್ಪರವರ ಅಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನಿತ್ತು ವಿವಿಧ ಸಮಿತಿಗಳಲ್ಲಿ ಭಾಗಿಧಾರರಾಗಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಜನ್ಮ ಶತಾಬ್ದಿ ಸಮಾರಂಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಂಡರೀಕಾಕ್ಷ ಯು. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply