ಆರೋಗ್ಯವಂತ ಸಮಾಜ ರಾಷ್ಟ್ರದ ಪ್ರಗತಿಗೆ ಪೂರಕ~ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ದ ಶುಭ ಸಂದರ್ಭದಲ್ಲಿ ಮಂಗಳವಾರ ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡವ ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಡಲು ಸಾಧ್ಯ. ಇಂದು ಎಲ್ಲರಿಗೂ ಸಿರಿವಂತಿಕೆ ಇದೆ. ಆದರೆ ಒಂದಿಲ್ಲೊ0ದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇಡೀ ಸಮಾಜ ಆರೋಗ್ಯವಂತವಾಗಿ ಇರಬೇಕು ಎಂಬ ಕಾರಣಕ್ಕಾಗಿ ಇಲ್ಲಿ ಧನ್ವಂತಿ ನೆಲೆ ನಿಂತಿದ್ದಾನೆ. ಆತನ ಕೃಪೆಯಿಂದಲೇ ಸಮಾಜ ಮತ್ತು ನಮ್ಮ ನಾಡು ಅಭ್ಯುದಯ ಸಾಧಿಸಲಿ ಎಂದು ಅವರು ಆಶಿಸಿದರು.


ದೇವರ ಕೃಪೆ ಇಲ್ಲದೇ ಏನನ್ನೂ ಮಾಡಲಾಗದು. ಸಮಾಜದ ವಿವಿಧ ಸ್ತರದ ಜನರಿಗೆ ಇಂದು ಆರೋಗ್ಯ ಮತ್ತು ನೆಮ್ಮದಿಯ ಅಗತ್ಯತೆ ಬಹಳವಿದೆ. ಎಲ್ಲ ಸುಖಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದರೆ ಮೊದಲು ದೇಹ ಮತ್ತು ಮನಸ್ಸುಗಳು 
ಸ್ವಾಸ್ಥ್ಯವಾಗಿ ಇರಬೇಕು. ಅದಕ್ಕಾಗಿಯೇ ಧ್ಯಾನ, ಪೂಜೆ, ಭಕ್ತಿಯನ್ನು ನಮ್ಮದಾಗಿಸಿ ಕೊಳ್ಳಬೇಕು. ಮಠ, ಮಂದಿರ ಮತ್ತು ಗುರುಗಳ ವೃಂದಾವನ ಸನ್ನಿಧಾನಗಳು ಈ ರೀತಿಯ ಚಟುವಟಿಕೆಗಳಿಗೆ ಪ್ರೇರಣಾ ಕೇಂದ್ರಗಳಾಗಿರುವುದು ನಮ್ಮೆಲ್ಲರ ಸುಕೃತವೆಂದರು.

ಗುರುಮನೆ- ಅರಮನೆ ಸಂಬ೦ಧ ಮುಖ್ಯ: ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣಗೊಳಿಸಿದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಮಾತನಾಡಿ, ಗುರುಮನೆ- ಅರಮನೆ ಪವಿತ್ರ ಸಂಬ೦ಧ ಇದ್ದರೆ ನಾಡು ಸುಭಿಕ್ಷೆಯಾಗಿರುತ್ತದೆ ಎಂದರು.


ನಮ್ಮ ಪರಂಪರೆಯ ಎಲ್ಲ ರಾಜ ಮಹಾರಾಜರೂ ಉತ್ತರಾದಿ ಮಠದ ಗುರುಗಳಿಗೆ ಭಕ್ತಿ, ಗೌರವ ಮತ್ತು ವಿಧೇಯತೆಯನ್ನು ತೋರಿ ರಾಜ್ಯಭಾರ ಮಾಡಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೂ ಸಾಗುತ್ತಿದ್ದೇವೆ. ಉತ್ತರಾದಿ ಮಠದ ಯತಿಗಳ ಮಹಾಕೃಪೆ ನಮ್ಮ ವಂಶದ ಹಿರಿಯರಿಗೆ ವರವಾಗಿ ದೊರಕಿದೆ. ಮೈಸೂರಿನ ಧನ್ವಂತರಿ ಸನ್ನಿಧಿ ಕೃಪೆಯಿಂದ ಎಲ್ಲರಿಗೂ ಸಮಗ್ರ ಆರೋಗ್ಯ ಪ್ರಾಪ್ತಿಯಾಗಲಿ. ಇಲ್ಲಿನ ಧಾರ್ಮಿಕ ಚಟುವಟಿಕೆಗಳಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.


ಇದೇ ಸಂದರ್ಭ ಶ್ರೀಗಳು ಯದುವೀರ ಕೃಷ್ಣದತ್ತ ಅವರಿಗೆ ಸನ್ಮಾನಪತ್ರ ಸಮರ್ಪಣೆ ಮಾಡಿ, ಫಲ ಮಂತ್ರಾಕ್ಷತೆ ಇತ್ತು ಗೌರವಿಸಿದರು. ಮಠಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಗೌರವಿಸಲಾಯಿತು. ನಂತರ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ, ಧನ್ವಂತರಿಗೆ ಮಹಾಪೂಜೆಯನ್ನು ಶ್ರೀಗಳು ನೆರವೇರಿಸಿದರು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಆಡಳಿತ ವ್ಯವಸ್ಥೆಗೆ ಧರ್ಮದ ಸೂತ್ರಗಳನ್ನು ಅಳವಡಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನುಡಿದರು. ಮೈಸೂರು ಅರಸರು ಈ ಬದ್ಧತೆಯನ್ನು ರೂಢಿಸಿಕೊಂಡ ಕಾರಣ ಇಡೀ ವಿಶ್ವಕ್ಕೆ ಮೈಸೂರು ಮಾದರಿ ರಾಜ್ಯವಾಗಿದೆ. ನಮ್ಮ ಸನಾತನ ಧರ್ಮ, ಸಂಸ್ಕೃತಿಯಲ್ಲಿರುವ ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿ ಕ್ಷಣವೂ ನಮ್ಮದಾಗಿಸಿಕೊಳ್ಳಲು ಯತ್ನ ಮಾಡಬೇಕು.

ಸಾಮಾನ್ಯ ಪ್ರಜೆಯಿಂದ ಹಿಡಿದು ರಾಜನವರೆಗೆ ಈ ಅರಿವು ಇರಬೇಕು. ಧರ್ಮ ಮಾರ್ಗವನ್ನು ಮರೆತರೆ ನಮ್ಮ ಆರೋಗ್ಯ ಮಾತ್ರವಲ್ಲ, ನಾಡಿನ ಆರೋಗ್ಯವೂ ಕೆಡುತ್ತದೆ. ಧನ್ವಂತರಿ ದೇವನ ಆರಾಧನೆ ಮತ್ತು ಸ್ಮರಣೆಗಳು ನಮ್ಮಲ್ಲಿ ಸ್ವಾಸ್ಥ್ಯ ಪಾಲನೆಗೆ ಪ್ರೇರಕ ಮತ್ತು ಪೂರಕವಾಗಿದೆ. ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುವ ಧನ್ವಂತರಿಯನ್ನು ಮರೆಯಬಾರದು ಎಂದು ಸ್ವಾಮೀಜಿ ಸಂದೇಶ ನೀಡಿದರು.

ಮೈಸೂರಿನ ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ದ ಸಂದರ್ಭದಲ್ಲಿ ಮಂಗಳವಾರ ದೇಗುಲದ ನೂತನ ವಿನ್ಯಾಸದ ಗೋಡೆಯನ್ನು  ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣಗೊಳಿಸಿದರು. ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಪಂಡಿತ ಅನಿರುದ್ಧಾಚಾರ್ಯ ಪಾಂಡುರ೦ಗಿ ಇತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply