“ಅಮೃತಾಂಜಲಿ” ಸರಣಿ ಕಾರ್ಯಕ್ರಮ

ಕಾಪು:-ಬಾಲ್ಯದಿಂದಲೇ ಗಾಂಧೀವಿಚಾರಧಾರೆಗಳಿಗೆ ಪ್ರಭಾವಿತರಾಗಿ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿದಲ್ಲದೆ ರಾಷ್ಟ್ರೀಯ ಸೇವಾದಳದ ಕಾರ್ಯಕರ್ತರಾಗಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದು, ಜೈಲಿನಲ್ಲಿ ಅವರ ದಿನಚರಿಯ ಬಗ್ಗೆ ಅವರು ತಿಳಿಸಿದ ಮಾಹಿತಿಯನ್ನು ಅವರ ಪುತ್ರಿ (ಪರಿಸರದಲ್ಲಿ ಕಾಮಿನಿ ಟೀಚರ್ ಎಂದೇ ಖ್ಯಾತರಾದ)ಅಚ್ಯುತನಾರಾಯಣೀ ತಿಳಿಸಿದರು.

ಅವರು ರವಿವಾರ ಸ್ವಾತಂತ್ರ್ಯ ಸೇನಾನಿ ಮಲ್ಲಾರು ಬಾಬು ಮಾಸ್ತರ್ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯಲ್ಲಿ ಏರ್ಪಡಿಸಿದ “ಅಮೃತಾಂಜಲಿ” ಸರಣಿ ಕಾರ್ಯಕ್ರಮದ 6ನೇ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿ ಸೇನಾನಿ ಬಾಬು ಮಾಸ್ತರ್ ಭಾವಚಿತ್ರಕ್ಕೆ ಪುಪ್ಪಾಂಜಲಿಯೊoದಿಗೆ ನುಡಿನಮನದಲ್ಲಿ ಮಾತನಾಡುತ್ತಾ, ಅವರು ಜೀವನದಲ್ಲಿ ಬಡವರಾಗಿದ್ದರೂ ಗುಣದಲ್ಲಿ ಬಡವರಾಗಿರಲಿಲ್ಲ. ಪ್ರತೀ ವರ್ಷವೂ ಧ್ವಜಾರೋಹಣ ಮಾಡಿ ಎಲ್ಲರಿಗೂ ಸಿಹಿ ಹಂಚುತ್ತಿದ್ದರು. ನಮಗೆಲ್ಲರಿಗೂ ಬಾಬು ಮಾಸ್ತರ್‌ರವರ ಜೀವನವೇ ಒಂದು ಸಂದೇಶವಾಗಿದೆ ಎಂದರು.
ಸಮಾಜಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮಾತನಾಡಿ ಮಗ್ದ ಮನಸ್ಸಿನ ಮಕ್ಕಳನ್ನು ದೇವರೇ ಎಂದು ಕರೆಯುತ್ತಿದ್ದ ಬಾಬು ಮಾಸ್ತರ್‌ರವರು ಶುಭ್ರವಸ್ತçಧಾರಿ, ನಡೆನುಡಿಯಲ್ಲೂ ಆದರ್ಶವಾಗಿದ್ದವರು. ನಮ್ಮ ತಂದೆಯವರ ಒಡನಾಡಿಯಾಗಿದ್ದು ಅವರೂ ಖಾದಿ ವಸ್ತçಧಾರಿ, ಗಾಂಧೀಟೋಪಿ ಧರಿಸುತ್ತಿದ್ದರು. ಸ್ವಾತಂತ್ರö್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಕಾಪು ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಊರಿನಲ್ಲಿ ಅವರ ಸಂಸ್ಮರಣೆ ಮಾಡುತ್ತಿರುವುದು ನಮಗೂ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡಿ ಕಸಾಪ ಕಾಪು ತಾಲೂಕು ಘಟಕವು ದೇಶದ ಸ್ವಾತಂತ್ರö್ಯ ಅಮೃತಮಹೋತ್ಸವದ ಹೊಸ್ತಿಲ್ಲಿ ತಾಲೂಕಿನ ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸಿ ಅವರು ಹುಟ್ಟಿದ ಮನೆ/ಊರಿನಲ್ಲಿ ಸಂಸ್ಮರಣೆ ಮಾಡುವ ಮೂಲಕ ಗೌರವ ಸಲ್ಲಿಸುವುದರ ಜೊತೆಯಲ್ಲಿ ಅವರ ಹೋರಾಟದ ಸಂಕ್ಷಿಪ್ತ ಘಟನೆಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಮುದ್ರಿಸಿ ಶಾಲಾ ವಾಚನಾಲಯಗಳಿಗೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.

ವೇದಿಕೆಯಲ್ಲಿ ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಬಾಬು ಮಾಸ್ತರ್‌ರವರ ಮೊಮ್ಮಗ ನಂದಕಿಶೋರ್ ತಲ್ವಾರ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಗೌರವ ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ಧನ್ಯವಾದವಿತ್ತರು. ಕಾರ್ಯಕ್ರಮದ ಸಮಗ್ರ ಸಂಯೋಜಕ ಎಸ್.ಎಸ್.ಪ್ರಸಾದ್, ಸದಸ್ಯರಾದ ಮಧುಕರ್ ಎಸ್.ಯು, ದೇವದಾಸ್ ಪಾಟ್ಕರ್, ಬಾಬು ಮಾಸ್ತರ್‌ರವರ ಮೊಮ್ಮಗ ಪ್ರಶಾಂತ್ ಮೊದಲಿಯಾರ್, ಸ್ವಾತಂತ್ರ್ಯ ಸೇನಾನಿ ಆರ್.ಜಿ.ಸಾಲಿಯಾನ್‌ರ ಪುತ್ರಿ ಶಾರದಾ ಎರ್ಮಾಳ್, ಆಮಂತ್ರಿತ ಗಣ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply