ಇರುವುದೊಂದೇ ಭೂಮಿ~ ಪ್ರೋ. ಕೃಷ್ಣಕೊತಾಯ

‘ಈ ಭೂಮಿಯನ್ನು ನಾವು ಪಿತ್ರಾರ್ಜಿತ ಆಸ್ತಿಯಾಗಿ ಪಡೆದಿಲ್ಲ. ನಮ್ಮ ಮಕ್ಕಳಿಂದ ಅದನ್ನು ಕಡವಾಗಿ ಪಡೆದುಕೊಂಡಿದ್ದೇವೆ’ ಎಂಬ ಮಾತೊಂದಿದೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಭೂಮಿಯನ್ನು ಆಶ್ರಯಿಸಿಕೊಂಡಿರುತ್ತಾನೆ. ಅಂತಹ ಭೂಮಿಯ ಬಗೆಗಿನ ಕಾಳಜಿ ಮನುಕುಲಕ್ಕಿಲ್ಲದಿರುವುದು ಖೇದಕರ. ಭೂಮಿ, ನೀರು, ಅರಣ್ಯ ಇನ್ನಿತರ ಪರಿಸರದ ಅಂಗಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರದ ಪ್ರೋ. ಕೃಷ್ಣಕೊತಾಯ ಅಭಿಪ್ರಾಯಪಟ್ಟರು.
ಅವರು ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪರಿಸರ ಸಂಘ ಹಾಗೂ ಕರ್ನಾಟಕ ಬ್ಯಾಂಕ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಟ್ಟಿದ್ದ ‘ಇರುವುದೊಂದೇ ಭೂಮಿ’ ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಾಡುತ್ತಿದ್ದರು.
ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಭರತ್ ವಿ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪರಿಸರದ ಅರಿವಿನ ಬಗೆಗೆ ತಿಳಿಸಿದರು.
ಪರಿಸರ ಸಂಘದ ಸಂಚಾಲಕ ಶ್ರೀ ಸಂತೋಷ್ ಎನ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶ್ರೀಹರಿ, ಕು ಅನುಷ, ಕು ಶ್ರಾವ್ಯ, ಕು,ಪಾವನ, ಕು.ಶ್ರೇಯ, ಶ್ರೀ ಮಯೂರ್ ಹಾಗೂ ಶ್ರೀ ಕಿರಣ್ ಉಡುಪ ಪರಿಸರದ ಗೀತೆ ಹಾಡಿ ಕಿರುಚಿತ್ರಗಳನ್ನು ಸಂಯೋಜಿಸಿದ್ದರು.
ಶ್ರೀ ನವೀನ್ ಭಟ್ ಸ್ವಾಗತಿಸಿ, ಕು. ಸಮೀಕ್ಷಾ ವಂದಿಸಿದರು.
ಕು. ಸಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply