ಆದರ್ಶಕಾಲೇಜ್ ಆಫ್ ನರ್ಸಿಂಗ್ ಉಡುಪಿ ಪೌಷ್ಟಿ ಕ ಆಹಾರ ದಿನಾಚರಣೆ

ಆದರ್ಶ ಚಾರಿಟೇಬಲ್ ಟ್ರಸ್ಟ್‌ನ ಅಧೀನದ, ಆದರ್ಶ ಸಮೂಹ ಸಂಸ್ಥೆಯ ಶ್ರೀ ಆದರ್ಶ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪೌಷ್ಟಿಕ ಆಹಾರ ದಿನಾಚರಣೆ ತಾರೀಕು 26-8-2023 ರಂದು ಆಚರಿಸಲಾಯಿತು.

ಕಾಲೇಜಿನ ಎರಡನೇ ಸೆಮಿಸ್ಟರ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ವಿವಿಧ ಬಗೆಯ
ಪೌಷ್ಟಿಕ ಆಹಾರಗಳನ್ನು ತಯಾರಿಸಿದ್ದರು ಪೌಷ್ಟಿಕ ಆಹಾರದ ಮಹತ್ವ ಅದರಲ್ಲಿರುವ ಪೋಷಕಾಂಶಗಳು ಮತ್ತು ಅವುಗಳು ದೇಹದ ಬೆಳವಣಿಗೆಗೆ ಹೇಗೆ ಸಹಕಾರಿಯಾಗಬಲ್ಲುದು ಎನ್ನುವ ಕುರಿತು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ತೀರ್ಪುಗಾರರಾಗಿ, ಡಾ. ಸುಮಿತ್ ಕೌರ್‌ ದಿಲ್ ಪ್ರಾಂಶುಪಾಲೆ ಆದರ್ಶ ಇನ್ಸ್ ಟೋಟ್ಸ್ ಆಫ್ ವ್ಯಾರ ಮೆಡಿಕಲ್ ಕಾಲೇಜಿನ, ಶ್ರೀ ರವಿ ಕುಮಾರ್ ಟಿ. ಎನ್ ಆದರ್ಶ ಇನ್ಸ್ ಟೋಟ್ಸ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಉಪಪ್ರಾಂಶುಪಾಲ ಮತ್ತು ಡಾ. ಸತೀಶ ಮಲ್ಯ ಆಡಳಿತಾಧಿಕಾರಿ ಆದರ್ಶ ಸಮೂಹ ಸಂಸ್ಥೆ ಇವರುಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು ಮತ್ತು ವಿದ್ಯಾರ್ಥಿಗಳು ತಯಾರಿಸಿದ ಅಹಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ ಸುಧಿನ ಎಂ., ಪ್ರಾದ್ಯಾಪಕರಾದ
ಶ್ರೀಮತಿ ವಿನಯ, ಶ್ರೀಮತಿ ಅಶ್ವಿನಿ ನಾಯಕ್ ಮತ್ತು ಶ್ರೀಮತಿ ದಿವ್ಯ ಶೆಟ್ಟಿಯವರು ಭಾಗವಹಿಸಿದರು ಪಥ್ಯಾಹಾರ ತಜ್ಞ ಶ್ರೀಮತಿ. ಅನುಶ್ರೀ ಆಚಾರ್ಯರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ನಿರ್ದೇಶನವನ್ನು ನೀಡಿದರು. ಆದರ್ಶ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ.ಎಸ್. ಚಂದ್ರಶೇಖರ್ ಹಾಗೂ ಉಪ ಅದ್ಯಕ್ಷರಾದ ಶ್ರೀಮತಿ ವಿಮಲ ಚಂದ್ರಶೇಖರ್ ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply