ಪ್ರಸಾದ್ ನೇತ್ರಾಲಯ : ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ವಾಹನ ಚಾಲಕರಿಗೆ ನೇತ್ರ ಉಚಿತ ತಪಾಸಣಾ ಶಿಬಿರ

ಪ್ರಸಾದ್ ನೇತ್ರಾಲಯ, ಉಡುಪಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಉಡುಪಿ ರಸ್ತೆ ಸುರಕ್ಷತಾ ಸಪ್ತಾಹ ಅ೦ಗವಾಗಿ ವಾಹನ ಚಾಲಕರಿಗೆ ನೇತ್ರ ಉಚಿತ ತಪಾಸಣಾ ಶಿಬಿರ ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಹಾಗೂ ಉಡುಪಿ ಖಾಸಗೀ ಬಸ್ ಮಾಲಕರ ಸ೦ಘದ ಜ೦ಟಿ ಆಶ್ರಯದಲ್ಲಿ, ಬಸ್ ಚಾಲಕರಿಗೆ ನೇತ್ರ ಉಚಿತ ತಪಾಸಣೆ ಶಿಬಿರವನ್ನು ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆಸಲಾಯಿತು.

ಶಿಬಿರವನ್ನು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಹಾಗೂ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ರವಿಶ೦ಕರ್ ಅವರು ಉದ್ಘಾಟಿಸಿದರು. ಡಾ.ಕೃಷ್ಣಪ್ರಸಾದ್ ಅವರು ಮಾತನಾಡುತ್ತಾ, ವಾಹನ ಚಾಲಕರು ತಮ್ಮ ನೇತ್ರ ಆರೈಕೆಗೆ ಪ್ರಥಮ ಆಧ್ಯತೆ ನೀಡಬೇಕು.

ಕಾಲಕಾಲಕ್ಕೆ ನಿಯಮಿತವಾಗಿ ನೇತ್ರ ಪರೀಕ್ಷೆನಡೆಸುತ್ತಾ ಬಂದು, ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊ೦ಡರೆ ವಾಹನ ಅಪಘಾತಗಳನ್ನು ತಪ್ಪಿಸಬಹುದು. ಪ್ರಸಾದ್ ನೇತ್ರಾಲಯವು ಕಳೆದ ೨೩ ವರ್ಷಗಳಿ೦ದ ಸಾರಿಗೆ ಪ್ರಾಧಿಕಾರದೊಡನೆ ಕೈ ಜೋಡಿಸಿ, ಇಂತಹ ಶಿಬಿರಗಳನ್ನು ನಡೆಸುತ್ತಾ ಬ೦ದಿದೆ. ಕಳೆದ ೩ ವರ್ಷಗಳಿ೦ದ ಸೈಟ್ ಸೇವರ್ಸ್ ಸ೦ಸ್ಥೆಯ ಸಹಭಾಗಿತ್ವದಲ್ಲಿ ವಾಹನ ಚಾಲನಾ ಸುರಕ್ಷತಾ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸುತ್ತಿದೆ ಎ೦ದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ರವಿಶ೦ಕರ್ ಅವರು ಮಾತನಾಡುತ್ತಾ ವಾಹನ ಚಾಲಕರು ಖಡ್ಡಾಯವಾಗಿ ನೇತ್ರ ಪರೀಕ್ಷೆಗೆ ಒಳಗಾಗಬೇಕು. ದೇಹದ ಇತರ ಅಂಗ ಊನತೆಗಳಿದ್ದರೆ ಚಾಲನಾ ಪರವಾನಗಿಯನ್ನು ನೀಡಬಹುದಾಗಿದೆ.

ಆದರೆ ದೃಷ್ಟಿದೋಷ ಉಳ್ಳ ವಾಹನ ಚಾಲಕರಿಗೆ ಯಾವುದೇ ಕಾರಣಕ್ಕೂ ಚಾಲನಾ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದರು.

ಸಾರಿಗೆ ನಿರೀಕ್ಷಣಾಧಿಕಾರಿ ಶ್ರೀ ಮಾರುತಿ ನಾಯಕ್, ಖಾಸಗೀ ಬಸ್ ಮಾಲಕರ ಸ೦ಘದ ಅಧ್ಯಕ್ಷ ಶ್ರೀ ರಾಘವೇ೦ದ್ರ ಭಟ್, ನೇತ್ರ ತಜ್ಞ ಡಾ. ಕೃಷ್ಣಕಾ೦ತ್ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply