​ಉಡುಪಿ​ ​​ಜಿಲ್ಲೆಯಲ್ಲಿ ​ಬಿರುಸಿನ ಮತದಾನ

ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾ​ಗಿದೆ. ಮತದಾರರು ಸರದಿಯ ಸಾಲಿನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಸೂತ್ರ ಮತದಾನಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಪ್ರಕ್ರಿಯೆ ಬಗ್ಗೆ ಜಿಲ್ಲಾಧಿಕಾರಿ ನಿಗಾ ವಹಿಸುತ್ತಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 45 ಶೇಕಡ ಮತದಾನವಾಗಿದೆ.  ಕಾಪು ಕ್ಷೇತ್ರದಲ್ಲಿ 49 ಶೇಕಡಾ,  ಕಾರ್ಕಳದಲ್ಲಿ 49 ಶೇಕಡಾ,  ಕುಂದಾಪುರ 49 ಶೇಕಡಾ  ಹಾಗು  ಉಡುಪಿಯಲ್ಲಿ  46 ಶೇಕಡಾ ಮತದಾನವಾಗಿದೆ.

 
 
 
 
 
 
 
 
 
 
 

Leave a Reply