ನಿದ್ದೆ ಇಲ್ಲದ ಶ್ರಮದಿಂದ ಕನಸು ಸಾಕಾರ- ಜಗನ್ನಾಥ ಕೋಟೆ.

ಯು.ಪಿ.ಎಂ.ಸಿ- ಎನ್.ಎಸ್. ಎಸ್ ಶಿಬಿರ ಸಮಾರೋಪ.

ಬದುಕಿನಲ್ಲಿ ಉತ್ತಮ ಗುರಿಹೊಂದುವ ಕನಸು ಕಾಣಬೇಕಾಗಿದ್ದು ಶ್ರಮ ಇಲ್ಲದ ನಿದ್ದೆಯಿಂದ ಕನಸು ಕಂಡರೆ ನಿದ್ದೆ ಇಲ್ಲದ ಶ್ರಮದಿಂದ ಇಂತಹ ಕನಸುಗಳು ನನಸಾಗಲು ಸಾಧ್ಯ.

ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರಿಂದ ಕಿರಿಯರಿಗೆ ಸಂಸ್ಕಾರಗಳು ಅನಾಯಾಸವಾಗಿ ಹರಿ ಯುತ್ತಿದ್ದು ವಿಭಕ್ತ ಕುಟುಂಬ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಸಹಬಾಳ್ವೆ, ಸಹಕಾರ ಸದ್ಗುಣ, ಸಂಸ್ಕಾರ ಮೊದಲಾದ ಮೌಲ್ಯಗಳು ಎನ್‌.ಎಸ್.ಎಸ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಲಭಿಸುವುದಾಗಿ ಕಟಪಾಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊಟೇರಿಯನ್ ಶ್ರೀ ಜಗನ್ನಾಥ ಕೋಟೆ ಇವರು ಹೇಳಿದರು.

ಅವರು ಡಿಸೆಂಬರ್ 27ರಂದು ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿ ಇಲ್ಲಿ ನಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೋಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್, ಎಸ್.ವಿ.ಎಸ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಡಾ.ದಯಾನಂದ ಪೈ, ಎಸ್.ವಿ.ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಎನ್.ಎಸ್.ಎಸ್ ಸಹ ಯೋಜನಾ ಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು, ಯೋಜನಾಧಿಕಾರಿ ರಾಜೇಶ್ ಕುಮಾರ್ ಧನ್ಯವಾದ ವಿತ್ತರು. ಕನ್ನಡ ಉಪನ್ಯಾಸಕ ಶಶಿಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply