ಪೂರ್ಣಪ್ರಜ್ಞ ಪದವಿ ಕಾಲೇಜ್ , ಉಡುಪಿ – ಐ ಓ ಟಿ ಕಾರ್ಯಗಾರ

ಪಿಪಿಸಿ ಕಂಪ್ಯೂಟರ್ ಸೈನ್ಸ್  ವಿಭಾಗ ಮತ್ತು ಮದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್, ಬಂಟಕಲ್ನ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳ ಸಹಯೋಗದಲ್ಲಿ ಐ ಓ ಟಿ ಕಾರ್ಯಗಾರ ಇತ್ತೀಚೆಗೆ  ಕಾಲೇಜಿನಲ್ಲಿ ನಡೆಯಿತು. ಐ ಓ ಟಿ ಯ ಎಲ್ಲ ಆಯಾಮಗಳು ಹಾಗೂ ಅವುಗಳ ಕಾರ್ಯವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ದೈನಂದಿನ ಜೀವನದ ಭಾಗವಾಗಿರುವ ಆಧುನಿಕ ಜಗತ್ತಿನ ಹೊಸ ಸಾಧನಗಳ ಬಗ್ಗೆ ಮಾಹಿತಿ ನೀಡಲಾಯಿತು. ಶ್ರೀಕಾಂತ್. ಎಂ. ಪಿಪಿಸಿ ಕಂಪ್ಯೂಟರ್ ವಿಭಾಗ ಮುಖ್ಯಸ್ಥರು ಹಾಗೂ ರಾಘವೇಂದ್ರ ಐ ಹೆಗಡೆ ಹಿರಿಯ ಉಪನ್ಯಾಸಕರು ಕಂಪ್ಯೂಟರ್ ಸೈನ್ಸ್ ವಿಭಾಗ ಇಂಜಿನಿಯರಿಂಗ್ ಕಾಲೇಜ್, ಬಂಟಕಲ್ ಉಪಸ್ಥಿತರಿದ್ದರು ಅನುಷ್ಕಾ ರವರು  ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರೀತಿ  ಭಟ್ ಅವರು ವಂದಿಸಿದರು.

 
 
 
 
 
 
 
 
 
 
 

Leave a Reply