ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಕಾರ್ಯಕ್ರಮ.

ಮಿಲಾಗ್ರೇಸ್ ಕಾಲೇಜು ಕಲ್ಯಾಣಪುರ ಉಡುಪಿ ಇಲ್ಲಿನ ಎನ್ಎಸ್ಎಸ್ ನ ಘಟಕದ ವತಿಯಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳವರವರು ವಿದ್ಯಾರ್ಥಿಗಳು ಡ್ರಗ್ಸ್ ಹವ್ಯಾಸ ವನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬಾರದೆಂದು ಮನವರಿಕೆ ಮಾಡಿದರು.

ಅದೇ ರೀತಿ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಯಾಗಿರುವ ಎ ವಿ ಬಾಳಿಗ ಆಸ್ಪತ್ರೆ ಯ ಮನೋವೈದ್ಯಾಧಿಕಾರಿಗಳಾದ ಡಾ. ಪಿ ವಿ ಭಂಡಾರಿಇವರು ಮದ್ಯಪಾನ ಧೂಮಪಾನ ಡ್ರಗ್ಸ್ ತಂಬಾಕು ಇನ್ನಿತರ ಎಲ್ಲಾ ಹವ್ಯಾಸವು ಮಾನವನ ಜೀವನದಲ್ಲಿ ಅಳವಡಿಸಿಕೊಂಡರೆ ಅದರಿಂದ ಉಂಟಾಗುವ ದುಷ್ಪರಿಣಾಮಗಳು, ತೊಂದರೆಗಳ ಮಾಹಿತಿಯ ಜೊತೆಗೆ ಈ ತರದ ಹವ್ಯಾಸಗಳನ್ನು ಅಳವಡಿಸಿಕೊಳ್ಳಬಾರದೆಂದು ತಿಳಿ ಹೇಳಿದರು.

ವಿದ್ಯಾರ್ಥಿಗಳು ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಸವಿಸ್ತಾರವಾಗಿ ತಿಳಿಸಿದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಡಾ. ಕೇಶವ ನಾಯಕ್, ಹೈಟೆಕ್ ಹಾಸ್ಪಿಟಲ್ ಉಡುಪಿ ಮತ್ತು ಮಿಸ್ಟರ್ ರಾಕೇಶ್, ಸಂಚಾಲಕರು, ಗೊರಟಿ ಹಾಸ್ಪಿಟಲ್ ಉಡುಪಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ ಡಾ. ಜಯರಾಮ್ ಶೆಟ್ಟಿಗಾರ್ ಮತ್ತು ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ. ಎಂ. ಜೋಗಿ, ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ಎನ್ಎಸ್ಎಸ್ ನ ಸ್ವಯಂಸೇವಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ದ್ವಿತೀಯ ಬಿ ಕಾಂ ನ ಕುಮಾರಿ ಸಹನ ಕಾರ್ಯಕ್ರಮವನ್ನು ನಿರ್ವಹಿಸಿದರು.

 
 
 
 
 
 
 
 
 
 
 

Leave a Reply