ಮಾದಕ ವ್ಯಸನದಿಂದ ಬದುಕು ನರಕವಾಗುವುದು : ರಾಜಶೇಖರ್, ಸಬ್ ಇನ್ಸ್‌ಪೆಕ್ಟರ್, ಬ್ರಹ್ಮಾವರ

ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಬ್ರಹ್ಮಾವರ ಪೋಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾದಕ ವ್ಯಸನದಿಂದ ಯುವ ಜನತೆ ತಮ್ಮ ವ್ಯಕ್ತಿತ್ವವನ್ನೇ ಮಣ್ಣುಪಾಲು ಮಾಡಿಕೊಳ್ಳುತ್ತಿ ದ್ದಾರೆ. ವಿದ್ಯಾಭ್ಯಾಸ, ಉದ್ಯೋಗ , ಸಂಸಾರ, ಕುಟುಂಬ ಎಲ್ಲವೂ ಜರ್ಜರಿತವಾಗಿ ಸಮಾಜಕ್ಕೇ ಹೊರೆಯಾಗುತ್ತಿದ್ದಾರೆ.

 

ತಮ್ಮ ಬದುಕನ್ನು ತಾವೇ ನರಕಗೊಳಿಸು ತ್ತಿದ್ದಾರೆ. ಈ ಬಗ್ಗೆ ಸ್ವ ಅರಿವು ಮೂಡಿಸಿ ಕೊಳ್ಳುವುದು ಇಂದಿನ ಅಗತ್ಯ. ವಿದ್ಯಾರ್ಥಿ ಗಳೇ ಹೆಚ್ಚಾಗಿ ಈ ಮಾದಕ ವ್ಯಸನಕ್ಕೆ ಗುರಿಯಾಗುತ್ತಿದ್ದು, ಸಕಾಲದಲ್ಲಿ ಎಚ್ಚೆತ್ತುಕೊಳ್ಳುವುದು ಅನಿವಾರ್ಯ . ಶ್ರೀಮಂತ ವರ್ಗದ ಯುವಜನತೆಯಿಂದ ಮುಂದುವರಿದು ಮದ್ಯಮವರ್ಗದವರೆಗೂ ಈ ವ್ಯಸನ ವ್ಯಾಪಕಗೊಳ್ಳುತ್ತಿದೆ.

ಹಳ್ಳಿಯ ಪ್ರದೇಶಗಳ ಯುವಕರು ಈ ಬಗ್ಗೆ ಕುತೂಹಲ ಬೆಳೆಸಿಕೊಳ್ಳದೆ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವುದು ಒಳಿತು ಎಂದು ಬ್ರಹ್ಮಾವರ ಠಾಣೆಯ ಠಾಣಾಧಿಕಾರಿಯಾದ ಶ್ರೀಯುತ ರಾಜಶೇಖರ್ ಇವರು ಬ್ರಹ್ಮಾವರದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಮಂಗಳೂರು ವಿಭಾಗದ ವಿಭಾಗಾಧಿಕಾರಿಯಾದ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರದ ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿಯಾಗಿರುವ ಶ್ರೀಮತಿ ಸವಿತಾ ಎರ್ಮಾಳ್ ಇವರು ಮಾತನಾಡಿ ನಮ್ಮ ಬದುಕು ಬಂಗಾರವಾಗಬೇಕಾದರೆ ನಮ್ಮ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು. ಮನೆ ಮಂದಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು.

ನಿಮ್ಮ ಸ್ನೇಹಿತರ ಆಯ್ಕೆಯಲ್ಲಿ ಜಾಗರೂಕ ರಾಗಿರಬೇಕು ಎಂದು ಹೇಳಿ ಮಾದಕ ವ್ಯಸನಿಗಳ ನರಕಸದೃಶ ಬದುಕಿನ ಬಗ್ಗೆ ಉದಾಹರಣೆ ಸಹಿತ ವಿವರಿಸಿ , ವಿದ್ಯಾರ್ಥಿ ಗಳು ಸನ್ಮಾರ್ಗದಲ್ಲಿ ಮುನ್ನಡೆಯಿರಿ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀ ರವೀಂದ್ರ ಉಪಾಧ್ಯ ಇವರು ವಿದ್ಯಾರ್ಥಿ ಗಳು ತಮ್ಮನಡೆನುಡಿಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕಾದ್ದು ಇಂದಿನ ಅನಿವಾರ್ಯತೆ.

ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳನ್ನು ದಾಳವಾಗಿ ಬಳಸಲು ಹಾತೊರೆಯುತ್ತಿರುವ ಈ ದಿನಗಳಲ್ಲಿ ಪ್ರತಿ ವಿಚಾರದಲ್ಲೂ ಕಾಳಜಿ ಅತ್ಯಗತ್ಯವೆಂದರು. ನಶಾ ಮುಕ್ತ ಭಾರತ ಅಂದೋಲನಕ್ಕೆ ಕೈ ಜೋಡಿಸುವ ಪ್ರತಿಜ್ಞೆ ಯನ್ನು ಈ ಸಂದರ್ಭದಲ್ಲಿ ಕೈಗೊಳ್ಳ ಲಾಯಿತು. ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಥ್ವಿಕ್ ಪ್ರತಿಜ್ಞಾ ಸ್ವೀಕಾರ ನಡೆಸಿಕೊಟ್ಟರು.

ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯರು ಪ್ರಾರ್ಥಿಸಿದರು. ಪ್ರಥಮ ವಾಣಿಜ್ಯ ವಿಭಾಗದ ಸಮಥ್೯ ಸ್ವಾಗತಿಸಿದರು. ಪ್ರಥಮ ವಿಜ್ಞಾನ ವಿಭಾಗದ ಖುಷಿ ವಂದಿಸಿದರು. ಪ್ರಥಮ ವಾಣಿಜ್ಯ ವಿಭಾಗದ ಅನಘಾ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply