ಟಿ.ಎ.ಪೈ ಪ್ರೌಢಶಾಲೆ: ವಿಶ್ವ ಪರಿಸರ ದಿನಾಚರಣೆ

ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನಲ್ಲಿ ವಿಶ್ವ ಪರಿಸರ ದಿನ’ ವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದಾ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಕು.ಕೀರ್ತಿರಾಜ್, ಕು.ಲಾವಣ್ಯ ಶೇಟ್, ಕು.ವೈಷ್ಣವಿ ವಿಶ್ವ ಪರಿಸರ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿ ಮಹಮ್ಮದ್ ರುಹಾನ್ ರಿಯಾಸ್ ಕಾರ್ಯಕ್ರಮ ನಿರೂಪಿಸಿದರು. ಕು. ಪವನ್ ಪೈ ವಂದನಾರ್ಪಣೆಗೈದರು. ಶಿಕ್ಷಕಿ ಶ್ರೀಮತಿ ಕಲ್ಪನಾ ಪೈ ಕಾರ್ಯಕ್ರಮವನ್ನು ಸಂಘಟಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಪರಿಸರ ಪ್ರಜ್ಞೆ ಬೆಳೆಸುವ ಮನೋರಂಜನಾ ಕಾರ್ಯಕ್ರಮ ಜರಗಿತು.

 
 
 
 
 
 
 
 
 
 
 

Leave a Reply