ಅಕ್ರಮ ಮಸೀದಿ ನಿರ್ಮಾಣ: ಪೊಲೀಸರ ಮೇಲೆ ಕಲ್ಲು ತೂರಾಟ

ಗಾಂಧಿನಗರ: ಗುಜರಾತ್‌ನ ಜುನಾಗಢದಲ್ಲಿ ಆಕ್ರಮವಾಗಿ ಮಸೀದಿ ನಿರ್ಮಿಸಿದ ಕುರಿತು ನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಕ್ಕೆ ರಾತ್ರೋರಾತ್ರಿ ಗಲಾಟೆ ನಡೆದಿದೆ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಮುಸ್ಲಿಮರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ಕೆಲ ವಾಹನಗಳಿಗೂ ಬೆಂಕಿ ಹಚ್ಚಲಾಗಿದ್ದು , ಏಕಾಏಕಿ ದಾಳಿ ಮಾಡಿದ ಕಾರಣ ಹಲವು ಪೊಲೀಸರಿಗೆ ಗಾಯಗಳಾಗಿವೆ . ಹಾಗೆಯೇ , ಗಲಾಟೆಯ ವೇಳೆ ಓರ್ವ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಜುನಾಗಢದ ಮಾಜೇವಾಡಿ ಗೇಟ್ ಬಳಿ ಸರ್ಕಾರದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಅಕ್ರಮವಾಗಿ ಮಸೀದಿ ನಿರ್ಮಾಣದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಐದು ದಿನದಲ್ಲಿ ಮಸೀದಿ ನಿರ್ಮಾಣದ ಕುರಿತು ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.

ಒಂದೆಡೆ ಮಸೀದಿ ಆಡಳಿತ ಮಂಡಳಿಯು ಪೊಲೀಸರಿಗೆ ಸಮರ್ಪಕವಾಗಿ ದಾಖಲೆ ನೀಡಿಲ್ಲ. ಮತ್ತೊಂದೆಡೆ , ನೂರಾರು ಮುಸ್ಲಿಮರು ಶುಕ್ರವಾರ ರಾತ್ರಿ ಏಕಾಏಕಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದಾಗಿ ಜುನಾಗಢದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ . ಪೊಲೀಸರು 174 ಮಂದಿಯನ್ನು ಬಂಧಿಸಿದ್ದಾರೆ.

ಸಕ್ರಮವಾಗಿ ಮಸೀದಿ ನಿರ್ಮಾಣದ ಕುರಿತು ಆಡಳಿತ ಮಂಡಳಿಯು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಮಸೀದಿಯನ್ನು ಕೆಡವಲು ತೀರ್ಮಾನಿಸಲಾಗಿದೆ. ಇದನ್ನು ವಿರೋಧಿಸಿ ನೂರಾರು ಮುಸ್ಲಿಮರು ಹಿಂಸಾಚಾರಕ್ಕೆ ಮುಂದಾಗಿದ್ದಾರೆ.

 
 
 
 
 
 
 
 
 
 
 

Leave a Reply