ಬೀದಿ ನಾಟಕದ ಮೂಲಕ ಆರೋಗ್ಯ ಶಿಕ್ಷಣ

ಯುಪಿಎಂಸಿ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ

ಜಿಲ್ಲಾ ಪಂಚಾಯತಿ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ , ಲಯನ್ಸ್ ಕ್ಲಬ್ ಮಣಿಪಾಲ ಇವರ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಇದರ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಅಭಿಯಾನ ಕಾರ್ಯಕ್ರಮವು ಡಿಸೆಂಬರ್ 16 ರಂದು ಆದಿಉಡುಪಿ ಕನ್ನಡ ಹಾಗೂ ಇಂಗ್ಲೀಷ್ ಮೀಡಿಯಂ ಶಾಲೆಯ ವಠಾರದಲ್ಲಿ ಚಾಲನೆಗೊಂಡಿತು.

ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ಕಾರ್ಯದರ್ಶಿ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷರಾದ ಡಾ.ಅರ್ಚನ ಭಕ್ತ ಮತ್ತು ಐಎಮ್ಎ ಇದರ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ.ಇಂದಿರಾ ಶಾನುಭಾಗ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾನಸಿಕ ಖಿನ್ನತೆ, ಆತ್ಮಹತ್ಯೆ ತಡೆ, ಹೆಣ್ಣು ಮಕ್ಕಳ ಆರೋಗ್ಯ ಮತ್ತು ಭ್ರೂಣಹತ್ಯೆ ತಡೆ, ಕ್ಷಯರೋಗದ ಜಾಗೃತಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕ ತಡೆ ಇವುಗಳ ಕುರಿತಾದ ಮಾಹಿತಿ ಕಾರ್ಯಕ್ರಮವು ಬೀದಿನಾಟಕದ ಮೂಲಕ ಬಿತ್ತರಿಸಲ್ಪಟ್ಟಿತು.

ಯು.ಪಿ.ಎಂ.ಸಿಯ ವಿದ್ಯಾರ್ಥಿಗಳಾದ ಪ್ರೇಮಸಾಯಿ, ಲಕ್ಷ್ಮೀ ಶೆಣೈ, ರಕ್ಷಿತಾ, ಆಶಿಕಾ, ಕಾವ್ಯ ಶೆಟ್ಟಿ, ಗಿರೀಶ್, ಜೀವನ್, ಶ್ರೇಯಾ, ಪ್ರಧಾನ್, ನಂದೀಶ್ ಇವರು ಭಾಗವಹಿಸಿದ್ದ ಈ ನಾಟಕವನ್ನು ರಂಗಭೂಮಿ ಕಲಾವಿದ ಶ್ರೀ ರಾಮಾಂಜಿ ನಮ್ಮಭೂಮಿ ಇವರು ನಿರ್ದೇಶಿಸಿ, ಹಳೆವಿದ್ಯಾರ್ಥಿ ಹಿಮಲ್ ಕುಮಾರ್ ಸಹಾಯಕ ನಿರ್ದೇಶಕರಾಗಿ ಬೀದಿನಾಟಕ ತಂಡವನ್ನು ಮುನ್ನೆಡಸಿದರು.
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ, ಆದಿಉಡುಪಿ ಶಾಲೆಯ ಇಂಗ್ಲಿಷ್ ವಿಭಾಗದ ಮುಖ್ಯ ಶಿಕ್ಷಕಿ ದೋರಾ ನರೋನ್ಹ, ಕನ್ನಡ ವಿಭಾಗದ ಮುಖ್ಯಶಿಕ್ಷಕಿ ವಿಜಯ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಕ.ಸಾ.ಪ ಉಡುಪಿ ತಾ. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಯು.ಪಿ.ಎಂ.ಸಿಯ ವಾಣಿಜ್ಯ ಉಪನ್ಯಾಸಕ ಹಾಗೂ ಬೀದಿನಾಟಕದ ಸಂಯೋಜಕ ಶ್ರೀ ರಾಘವೇಂದ್ರ ಜಿ.ಜಿ, ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply