ವಿಪ್ರ ಸಮಾಗಮ~ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ವಿವಿಧ ದಿನಾಚರಣೆಗಳು ಸಂಪನ್ನ.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ವಿಪ್ರ ಪುರುಷ ದಿನಾಚರಣೆ-ವೈದ್ಯರ ದಿನಾಚರಣೆ- ಪತ್ರಿಕಾ ದಿನಾಚರಣೆ- ಲೆಕ್ಕ ಪರಿಶೋಧಕರ ದಿನಾಚರಣೆ ಮತ್ತು ಗುರುವಂದನೆ.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಆಶ್ರಯದಲ್ಲಿ ವಿಪ್ರ ಪುರುಷರ ದಿನಾಚರಣೆ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಮತ್ತು ಲೆಕ್ಕ ಪರಿಶೋಧಕರ ದಿನಾಚರಣೆ ಮತ್ತು ಗುರುವಂದನೆಯನ್ನು ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಆಯೋಜಿಸ ಲಾಯಿತು.

ಈ ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಖ್ಯಾತ ಆಯುರ್ವೇದ ವೈದ್ಯ ಹಾಗೂ ಔಷಧೀಯ ಸಸ್ಯ ತಜ್ಞರಾದ ಡಾ. ಟಿ. ಶ್ರೀಧರ ಬಾಯರಿ, ಲೆಕ್ಕ ಪರಿಶೋಧಕರ ದಿನಾಚರಣೆ ಪ್ರಯುಕ್ತ ಹಿರಿಯ ಲೆಕ್ಕ ಪರಿಶೋಧಕರಾದ CA ಟಿ. ಪ್ರಶಾಂತ ಹೊಳ್ಳ, ಪತ್ರಿಕಾ ದಿನಾಚರಣೆ ಪ್ರಯುಕ್ತ ಹಿರಿಯ ಪತ್ರಕರ್ತ ಎಚ್.ಮೋಹನ್ ಉಡುಪ ಇವರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಸಮಾಜ ಸೇವಕರಾದ ಶ್ರೀ ಎಸ್. ವಿ. ಭಟ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತರಾದ ಟಿ. ಶ್ರೀಧರ ಬಾಯಿರಿ ಅವರು ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ತಿಳಿಸುತ್ತಾ ಆಯಾ ಕಾಲ ಮಾನಕ್ಕೆ ತಕ್ಕಂತೆ ಸಮತೋಲನ ಆಹಾರ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೂರ್ಣಪ್ರಜ್ಞ ಸಮೂಹ ವಿದ್ಯಾ ಸಂಸ್ಥೆಗಳ ಗೌರವ ಆಡಳಿತಾಧಿ ಕಾರಿಗಳಾದ ಡಾ. ಎ. ಪಿ. ಭಟ್ ಮಾತನಾಡಿ ಈಗಿನ ಮಕ್ಕಳು ಬಾಲ್ಯ ದಿಂದಲೇ ಸಂಸ್ಕೃತ ಭಾಷೆಯನ್ನು ಕಲಿಯುವುದರ ಮೂಲಕ ನಮ್ಮ ಪೂರ್ವಜ ರಿಂದ ಬಳುವಳಿಯಾಗಿ ಬಂದಂತಹ ಶಾಸ್ತ್ರ ಗ್ರಂಥಗಳನ್ನು ಓದಿ ಅಪಾರಜ್ಞಾನವನ್ನು ಗಳಿಸಿ ಸತ್ಪ್ರಜೆಗಳಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಮುಖ್ಯಸ್ಥರಾದ ಶ್ರೀ ಬಿ.ಕೆ. ನಾರಾಯಣ ಮಾತನಾಡಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ತಿಳಿ ಸುವುದು, ಕಲಿಸುವುದು ಹೆತ್ತವರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ ಹಸ್ತಾಂತರಿಸ ಲಾಯಿತು.

ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು.ರಾಜೇಶ್ ಭಟ್, ಚಂದ್ರಕಾಂತ ಕೆ.ಎನ್, ಗುರುಪ್ರಸಾದ್ , ನಾಗರಾಜ ಭಟ್, ಶಶಿಧರ್ ಭಟ್, ಹರಿ ಪ್ರಸಾದ್ ಇವರು ಸನ್ಮಾನಿತರನ್ನು ಮತ್ತು ಅತಿಥಿಗಳನ್ನು ಪರಿಚಯಿಸಿದರು.

ರಘುಪತಿ ರಾವ್ ನೂತನ ಸದಸ್ಯರ ಪಟ್ಟಿ ಯನ್ನು ವಾಚಿಸಿದರು. ಶ್ರೀಮತಿ ಸುಮನ ಆಚಾರ್ಯ ಇವರು ವಿವಿಧ ಮೋಜಿನಾಟ ಗಳನ್ನು ನಡೆಸಿಕೊಟ್ಟರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಸಹಕರಿಸಿ, ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ವಂದನಾರ್ಪಣೆ ಗೈದರು.

 
 
 
 
 
 
 
 
 
 
 

Leave a Reply