ಉಡುಪಿ -ಬಾಲಪ್ರತಿಭೋತ್ಸವ 2023

ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಸಂಯೋಜಿಸುತ್ತಿರುವ ಬಾಲಪ್ರತಿಭೋತ್ಸವ 2023 ಉಡುಪಿ. ದಿನಾಂಕ 06-08-23 ಆದಿತ್ಯವಾರದಂದು ಅಂಬಲಪಾಡಿ ದೇವಳದ ಭವಾನಿಮಂಟಪದಲ್ಲಿ ನಡೆಯಲಿದೆ. ಪರಿಷತ್ತಿನ ಅಧ್ಯಕ್ಷರಾದ ಯು.ಕೆ.ಪ್ರವೀಣ್ ರವರ ಅಧ್ಯಕ್ಷತೆಯಲ್ಲಿ ದೇವಳದ ಧರ್ಮದರ್ಶಿಗಳಾದ ಡಾ|| ನಿ.ಬಿ.ವಿಜಯ ಬಲ್ಲಾಳ್ ರವರು ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಲಿದ್ದಾರೆ. ಉಡುಪಿ, ಕುಂದಾಪುರ, ಕಾರ್ಕಳ, ಕಾಪು ಮುಂತಾದ ಕಡೆಗಳ ನೃತ್ಯಗುರುಗಳ 14 ಜನ ಬಾಲಪ್ರತಿಭೆಗಳು ನೃತ್ಯಪ್ರದರ್ಶನ ನೀಡಲಿದ್ದಾರೆ ಎಂದು ಪರಿಷತ್ತಿನ ಕಾರ್ಯದರ್ಶಿಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply