ಸಂಜೀವಿನಿ ಸ್ವ ಸಹಾಯ ಗುಂಪುಗಳ ವ್ಯವಹಾರಕ್ಕೆ ಟೆಕ್ನಿಕಲ್ ಟಚ್ – ಲೋಕೋಸ್ ತಂತ್ರಾಂಶ

ದಿನಾಂಕ: 27.11.2023 ರಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತಿ ಉಡುಪಿ ಹಾಗೂ ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಲೋಕೋಸ್ ತಂತ್ರಾಂಶದಲ್ಲಿ ವ್ಯವಹಾರದ ದತ್ತೀಕರಣ ಕುರಿತು ರಾಜ್ಯ ಮಟ್ಟದ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರಗಿತು. ಉಡುಪಿ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಎಚ್ ಕಾರ್ಯಕ್ರಮವನ್ನು ಉದ್ಘಾಟಿಸಿ ಲೋಕೋಸ್ ತಂತ್ರಾಂಶದಲ್ಲಿ ವ್ಯವಹಾರದ ದತ್ತೀಕರಣ ಆಗುವುದರಿಂದ ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾಚಾರದಲ್ಲಿ ಪರಿಪಕ್ವತೆ ಹೆಚ್ಚುತ್ತದೆ. ಶ್ರದ್ಧೆ ಇಂದು ತರಬೇತಿಯಲ್ಲಿ ಪಾಲ್ಗೊಂಡು ಲೋಕೋಸ್ ಅನುಷ್ಠಾನಕ್ಕೆ ಮಾಸ್ಟರ್ ಟ್ರೈನರ್ ಆಗಿ ರೂಪುಗೊಳ್ಳಿ ಎಂದು ಶುಭ ಹಾರೈಸಿದರು. 

ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಎಂ ಕೆ ಅಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಕ್ಷ್ಮೀಶ್ ಅವರು ಸ್ವಾಗತಿಸಿದರು, ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ನವ್ಯಾ ನಿರೂಪಿಸಿದರು. ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಕರುಣಾಕರ್ ಜೈನ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಯುವ ವೃತ್ತಿಪರ ರಾದ ಸಂಪತ್, ರುಡ್ ಸೆಟ್ ಉಪನ್ಯಾಸಕರಾದ ಸಂತೋಷ್ ಶೆಟ್ಟಿ, ಸಂಜೇವಿ ಏಕೆ ವ್ಯಕ್ತಿ ಸಮಾಲೋಚಕರಾದ ಕೆ ಪಾಂಡುರಂಗ ಇವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply