ಉಡುಪಿ ಜಿಲ್ಲೆಯ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಔಷಧಿ ಕಿಟ್ ವಿತರಣೆ

ಉಡುಪಿ ಜಿಲ್ಲೆಯ 60 ಜನರು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ 4 ಗೋಡೆಯ ಮಧ್ಯ ಇದ್ದು ಇವರಿಗೆ ದುಡಿಯಲು ಸಾಧ್ಯವಿರುವುದಿಲ್ಲ. ಇವರು ದುಡಿದು ಮನೆಗೆ ಅಸರೆಯಾಗ ಬೇಕಿತ್ತು.ಆದರೆ ಇಂದು ತಂದೆ ತಾಯಿ, ಮತ್ತಿತರರ ಮೇಲೆ ಅವಲಂಬಿಸಿದ್ದಾರೆ.ಇವರಿಗೆ ಔಷಧಿಗೆ ತಿಂಗಳಿಗೆ ಸಾವಿರಾರು ರೂಪಾಯಿ ಬೇಕಾಗುತ್ತವೆ ಅದರ ನಡುವೆ ಔಷದಿ ಕಿಟ್ (ಯೊರಿನ್ ಬ್ಯಾಗ್, ಜೆಲ್, ಕ್ಯಾತೆಟ್) ಹೀಗೆ ವಿವಿಧ ರೀತಿಯ ಔಷಧಿ ಬೇಕಾಗುತ್ತವೆ.

ಉಡುಪಿ ಜಿಲ್ಲೆಯಲ್ಲಿರುವ 60 ಜನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಔಷಧಿ ಕಿಟ್ ವಿತರಣೆ ಮಾಡುವ ಕಾರ್ಯ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ಮತ್ತು ಸೇವಾ ಭಾರತಿ ಕನ್ಯಾಡಿಯ ವತಿಯಿಂದ ವಿತರಣೆಯನ್ನು ಇಂದು ಮಾಡಲಾಯಿತು.

ಈ ಸಂಧರ್ಬದಲ್ಲಿ ಮಾತನಾಡಿದ ಕೆ ವಿಜಯ್ ಕೊಡವೂರು ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಮಕ್ಕಳಿಗೆ ಶಾಲೆಗೆ ಹೋಗಲು ಪುಸ್ತಕ, ಬ್ಯಾಗ್ ಹೀಗೆ ಶಾಲೆಯ ಶುಲ್ಕ ಕಟ್ಟಲು ಹಣವಿಲ್ಲದೆ ಮನೆಯಲ್ಲೇ ಕುಳಿತು ಕೊಳ್ಳುವ ಸ್ಥಿತಿ ಇದೆ. ಇನ್ನೂ ಇವರಿಗೆ ಮೂತ್ರ ಕೋಶದ ಕಾಯಿಲೆ, ಜೀರ್ಣಾಂಗದ ಕಾಯಿಲೆ, ಬಿಪಿ, ಶುಗರ್ ನಂತಹ ಅನೇಕ ಕಾಯಿಲೆ ಇರುತ್ತದೆ. 

ಇಂತಹ ಕಾಯಿಲೆಗೆ ಇವರಿಗೆ ತಿಂಗಳಿಗೆ ಸಾವಿರಾರು ರೂಪಾಯಿಯ  ಔಷಧ ಬೇಕಾಗುತ್ತವೆ. ಅದರ ಜೊತೆಯಲ್ಲಿ ಇವರಿಗೆ ಯೂರಿನ್ ಬ್ಯಾಗ್ ಹೀಗೆ ಹಲವು ರೀತಿಯ ಅನೇಕ ಸಾಮಗ್ರಿಗಳು ತಿಂಗಳಿಗೆ ಬೇಕಾಗುತ್ತವೆ. 

ದುಡಿಯಲು ಸಾಧ್ಯವಿಲ್ಲದ ಇವರಿಗೆ ತಿಂಗಳಿಗೆ ಸಾವಿರಾರು ರೂಪಾಯಿಯ ಔಷಧ ತರಲು, ಇತರ ಸಾಮಗ್ರಿ ತರಲು ಕಷ್ಟ ಸಾಧ್ಯ. ಆದ್ದರಿಂದ ಇವರಿಗೆ  ದಾನಿಗಳ ನೆರವಿನಿಂದ ಸಹಾಯ ಮಾಡಬೇಕಾಗಿರುತ್ತದೆ. ಉಡುಪಿ ಜಿಲ್ಲೆಯ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಅವರಗೆ ಪುನಃ ಚೇತನದ ವ್ಯವಸ್ಥೆ ಮಾಡಬೇಕು ಎಂದು ಯೋಚನೆ ಮಾಡಿದ್ದೇವೆ.
ಸೇವಾ ಧಾಮ ಕನ್ಯಾಡಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ, ಆದರೆ ಇಲ್ಲಿ ಹೋಗಲು 15-20 ಸಾವಿರ ರೂಪಾಯಿಯ ಔಷಧದ ವೆಚ್ಚ ಆಗುತ್ತದೆ. ನಿಮ್ಮ ಊರಿನಲ್ಲಿ, ಮನೆಯ ಹತ್ತಿರದಲ್ಲಿ  ಬೆನ್ನು ಮೂಳೆಮುರಿ ತಕ್ಕೆ ಒಳಗಾಗಿ ಮನೆಯಲ್ಲಿ  ಇರುವವರಿಗೆ ಪುನಃ ಚೇತನ ಸಂಸ್ಥೆಗೆ ಕಳುಹಿಸಿ ಇವರಿಗೆ ಸ್ವಂತ ಉದ್ಯೋಗಕ್ಕೆ, ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳುವ ಪ್ರಯತ್ನ ಮಾಡಲಾಗುವುದು ಮತ್ತು ಸರಕಾರದಿಂದ ಸಿಗುವ ಸವಲತ್ತು, ವೀಲ್ ಚೇರ್, ಔಷಧಿ ಹಾಗೂ ಇನ್ನಿತರ ಸೌಲಭ್ಯವನ್ನು ಮುಟ್ಟಿಸುವ ಕೆಲಸವನ್ನು ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ಮಾಡುವ ಕಾರ್ಯ ಮಾಡಲಾಗುವುದು.
ಈ ಸಂದರ್ಭದಲ್ಲಿ ಧಾನ್ಯ ಲಕ್ಷ್ಮಿ ರೈಸ್ ಮಿಲ್  ಮಾಲೀಕರ  ಮಾಧವ ಮೂರ್ತಿ, ಕನ್ಯಾಡಿ  ಸೇವಾಧಾಮ  ನಿರ್ದೇಶಕ  ರಾಯನ್ ಫರ್ನಾಂಡಿಸ್, ಸಕ್ಷಮ ಉಡುಪಿ ಜಿಲ್ಲಾಧ್ಯಕ್ಷೆ  ಲತಾ ಭಟ್,  DNA  ಮ್ಯಾನೇಜರ್ ರೂಪಲಕ್ಷ್ಮೀ, ಸ್ಪಂದನ ಬುದ್ಧಿ ಮಾಂದ್ಯ ಮಕ್ಕಳ ಶಾಲೆ ಮುಖ್ಯಸ್ಥರು ಜನಾರ್ಧನ್ ಉಪ್ಪೂರು ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು  ಅಧ್ಯಕ್ಷ  ಹರೀಶ್ ಕೊಡವೂರು,  ದಿವ್ಯಾಂಗ ರಕ್ಷಣಾ ಸಮಿತಿಯ ಸಹ ಪ್ರಮುಖ್ ಜಯ ಕಲ್ಮಾಡಿ ಮತ್ತು ಅಜಿತ್ ಬನ್ನಂಜೆ, ಆರ್ ಕೆ ಭಟ್, ವಿನಯ್ ಕೊಡವೂರು, ಐವನ್ ಫರ್ನಾಂಡಿಸ್, ಚಂದ್ರಚಿತ್ರ, ವಿಷ್ಣು ಭಟ್, ಗಿರೀಶ್ ಕರಂಬಳ್ಳಿ, Dear life ಮತ್ತು ಸೇವಾಭಾರತಿ ಕನ್ಯಾಡಿ ಇದರ ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply