ರೋಟರಿ ಉಡುಪಿಯ ಸಹಯೋಗದೊಂದಿಗೆ ಚೈಲ್ಡ್ ಲೈನ್-1098, ಉಡುಪಿ ವತಿಯಿಂದ ಸಹಾಯ

ಉಡುಪಿ: ಪೆರ್ಡೂರು ಪಾಡಿಗಾರ ವ್ಯಾಪ್ತಿಯ ಬಡ ಕುಟುಂಬಕ್ಕೆ ಹಾಗೂ ಮಂಚಿ ದುಗ್ಲಿಪದವು ವ್ಯಾಪ್ತಿಯಲ್ಲಿರುವ ಕೋರೋನಾ ಬಾಧಿತ ಎರಡು ಬಡ ಕುಟುಂಬಗಳಿಗೆ ಲಾಕ್ ಡೌನ್‌ ನಿಂದಾಗಿ ಜೀವನ ನಿರ್ವಹಣೆಯು ಕಷ್ಟವೆಂದು ಚೈಲ್ಡ್ ಲೈನ್-1098, ಉಡುಪಿಗೆ ಕರೆಬಂದಾಗ ರೋಟರಿ ಉಡುಪಿಯ ಸಹಯೋಗದೊಂದಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಲಾಯಿತು.ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ,ರೋ.ಬಿ.ವಿ.ಲಕ್ಷ್ಮೀ ನಾರಾಯಣ, ರೋ. ವನಿತಾ ಆರ್. ಉಪಾಧ್ಯಾಯ,ಮುರಳಿಕೃಷ್ಣ ಉಪಾಧ್ಯಾಯ,ಚೈಲ್ಡ್ ಲೈನ್ ಉಡುಪಿಯ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ, ಚೈಲ್ಡ್ ಲೈನ್ ನ ಪ್ರಮೋದ್ ಮತ್ತು ವೃಶಾಕ್ ಉಪಸ್ಥಿತ ರಿದ್ದರು.

 

 

 

 

 

 
 
 
 
 
 
 
 
 
 
 

Leave a Reply