ವಿಶ್ವಕಪ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಅಹ್ಮದಾಬಾದ್, ಅ.14: ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ಹೈ ವೋಲ್ಟೆಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಪಾಕಿಸ್ತಾನದ ವಿರುದ್ಧ 7 ವಿಕೆಟ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಪಾಕಿಸ್ತಾನದ ಆರಂಭಿಕ ಆಟಗಾರರನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ಸು ಕಂಡಿತು.

ಪಾಕಿಸ್ತಾನಕ್ಕೆ ಮಹಮ್ಮದ್ ಸಿರಾಜ್ ಮೊದಲ ಆಘಾತ ನೀಡಿದರು. ನಾಯಕ ಬಾಬರ್ ಆಜಮ್ ಅರ್ಧ ಶತಕ ಸಿಡಿಸಿ ತಂಡವನ್ನು ಆಧರಿಸಿದರು. ಮಹಮ್ಮದ್ ರಿಜ್ವಾನ್ 49 ರನ್ ಗೆ ಔಟಾದರು. ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ದಿಢೀರನೆ ಕುಸಿತ ಕಂಡಿತು. 154 ಕ್ಕೆ 2 ವಿಕೆಟ್ ಕಳೆದುಕೊಂಡ ಪಾಕಿಸ್ತಾನ, 42.5 ಓವರ್ ಗಳಲ್ಲಿ 191ಕ್ಕೆ ಆಲ್ ಔಟ್ ಆಗಿ ಭಾರತಕ್ಕೆ ಸುಲಭದ ಗುರಿ ನೀಡಿತು. ಬುಮ್ರಾ, ಸಿರಾಜ್, ಪಾಂಡ್ಯ, ಕುಲದೀಪ್, ಜಡೇಜಾ ತಲಾ 2 ವಿಕೆಟ್ ಪಡೆದರು.

ಸುಲಭದ ಗುರಿಯನ್ನು ಬೆನ್ನತ್ತಿದ್ದ ಭಾರತ, ನಾಯಕ ರೋಹಿತ್ ಶರ್ಮಾರವರ ಅಮೋಘ ಬ್ಯಾಟಿಂಗ್ ಸಹಾಯದಿಂದ ಉತ್ತಮ ರನ್ ರೇಟ್ ಕಾಯ್ದುಕೊಳ್ಳುವಲ್ಲಿ ಯಶಸ್ಸು ಕಂಡಿತು. ರೋಹಿತ್ ಶರ್ಮಾ 63 ಎಸೆತಗಳಲ್ಲಿ ತಲಾ 6 ಸಿಕ್ಸ್ ಮತ್ತು ಬೌಂಡರಿ ಮೂಲಕ 86 ರನ್ ಸಿಡಿಸಿ ಔಟಾದರು.

ರೋಹಿತ್ ಶರ್ಮಾಗೆ ಸಾಥ್ ನೀಡಿದ ಶ್ರೇಯಸ್ ಐಯ್ಯರ್ ಅಜೇಯ 53 ರನ್ ಸಿಡಿಸಿ ಗೆಲುವಿನ ರನ್ ಬಾರಿಸಿದರು. 30.3 ಓವರ್ ಗಳಲ್ಲಿ ಗೆಲುವಿನ ದಡ ಸೇರಿದ ಭಾರತ, ವಿಶ್ವಕಪ್ ನಲ್ಲಿ ಗೆಲುವಿನ ದಿಗ್ವಿಜಯ ಯಾತ್ರೆ ಮುಂದುವರಿಸಿದೆ. ಬುಮ್ರಾ ಪಂದ್ಯಶ್ರೇಷ್ಠ: 7-1-19-2 ಮೂಲಕ 2.7 ಎಕನಾಮಿ ರೇಟ್ ಮೂಲಕ ಆಕರ್ಷಕ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

 
 
 
 
 
 
 
 
 
 
 

Leave a Reply