ಡಾ.ರಾಜಲಕ್ಷ್ಮೀ ಸಂತೆಕಟ್ಟೆಯವರ ಸ್ವರಚಿತ ಕಥೆ ಕೇಳೋಣವೇ

ರೇಡಿಯೊ ಮಣಿಪಾಲ್ ನಲ್ಲಿ ಕಥೆ ಕೇಳೋಣದ 89ನೇ ಸಂಚಿಕೆ ಪ್ರಸಾರ.
ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್
ಸಮುದಾಯ ಬಾನುಲಿ ಕೇಂದ್ರ 📻 ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 89 ನೇ ಸಂಚಿಕೆ ಜನವರಿ ತಿಂಗಳ ದಿನಾಂಕ 13 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

ಈ ಸಂಚಿಕೆಯಲ್ಲಿ ಸ್ವರಚಿತ ಕಥೆಯನ್ನು ಸಾಹಿತ್ಯಾಸಕ್ತರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ರಾಜಲಕ್ಷ್ಮಿ ಸಂತೆಕಟ್ಟೆ ವಾಚಿಸಲಿದ್ದಾರೆ. ಜನವರಿ *14* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply