ಎಂ.ಐ.ಟಿ ಯು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ‘100 5G ಲ್ಯಾಬ್ಸ್ ಇನಿಶಿಯೇಟಿವ್’ ಗೆ ರಾಷ್ಟ್ರೀಯ ಮನ್ನಣೆಯೊಂದಿಗೆ ಆಯ್ಕೆ

ತಾಂತ್ರಿಕ ಉತ್ಕೃಷ್ಟತೆಯತ್ತ ಮಹತ್ವದ ದಾಪುಗಾಲಿನಲ್ಲಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಅಂಗ ಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯನ್ನು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಯಿಂದ ‘100 5G ಲ್ಯಾಬ್ಸ್ ಇನಿಶಿಯೇಟಿವ್’ ಗೆ ರಾಷ್ಟ್ರೀಯ ಮನ್ನಣೆಯೊಂದಿಗೆ ಆಯ್ಕೆ ಮಾಡಲಾಗಿದೆ . ಅಕ್ಟೋಬರ್ 27, 2023 ರಂದು ನವದೆಹಲಿಯ ಪ್ರಗತಿ ಮೈದಾನದ ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC-23) ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯೋಜಿಸಿದ್ದ ವರ್ಚುವಲ್ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ.

ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ನಡುವಿನ ಸಹಯೋಗದೊಂದಿಗೆ ಈ ದೂರದೃಷ್ಟಿಯ ಕಾರ್ಯಕ್ರಮವು ಭಾರತದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ 100 5G ಲ್ಯಾಬ್‌ಗಳ ಉದ್ಘಾಟನೆಯನ್ನು ಕಂಡಿತು. IMC-23, ಏಷ್ಯಾದ ಪ್ರಮುಖ ತಂತ್ರಜ್ಞಾನ ನಿರೂಪಣೆ ಎಂದು ಗುರುತಿಸಲ್ಪಟ್ಟಿದೆ, ಈ ಅಪರೂಪದ ಕಾರ್ಯಕ್ರಮಕ್ಕೆ ಜಾಗತಿಕ ವೇದಿಕೆಯನ್ನು ಒದಗಿಸಿದೆ, ಡಿಜಿಟಲ್ ತಂತ್ರಜ್ಞಾನದಲ್ಲಿ ಇತ್ತೀಚಿನದನ್ನು ಪ್ರದರ್ಶಿಸಲು ತಜ್ಞರ ಆಲೋಚನೆ ಮತ್ತು ನಾವೀನ್ಯತೆಯನ್ನು ಒಟ್ಟುಗೂಡಿಸಲಾಗಿದೆ.

ಎಂ ಐ ಟಿ ಮಣಿಪಾಲವು ಈ ಮೂಲಕ ತಾಂತ್ರಿಕ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಭಾರತದ ಡಿಜಿಟಲ್ ಕ್ರಾಂತಿಯ ಅಗ್ರಸ್ಥಾನದಲ್ಲಿ ಸಂಸ್ಥೆಯನ್ನು ಇರಿಸಿದೆ. 5G ಸ್ಟ್ಯಾಂಡ್ ಅಲೋನ್ ಮೂಲಸೌಕರ್ಯ, 5G ಸಿಮ್‌ಗಳು, ಡಾಂಗಲ್‌ಗಳು, IoT ಗೇಟ್‌ವೇ, ರೂಟರ್ ಮತ್ತು ಅಪ್ಲಿಕೇಶನ್ ಸರ್ವರ್‌ನಂತಹ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ 5G ಲ್ಯಾಬ್, ಎಂ ಐ ಟಿ ಮಣಿಪಾಲ್‌ಗೆ ರಾಷ್ಟ್ರದ 5G ಸನ್ನದ್ಧತೆಗೆ ಗಣನೀಯ ಕೊಡುಗೆ ನೀಡಲು ಶಕ್ತಿ ಹಾಗೂ ಅವಕಾಶ ನೀಡಿದೆ.

ಈ ಲ್ಯಾಬ್ ಸ್ವತ್ತುಗಳ ಮಾಲೀಕತ್ವವು ಎಂ ಐ ಟಿ ಮಣಿಪಾಲ್‌ನಲ್ಲಿಯೇ ಇರುತ್ತದೆ, ಯೋಜನೆಯ ಪ್ರಕಿಯೆ ಜಾರಿಯಲ್ಲಿರುವಾಗ ಮತ್ತು ಪೂರ್ಣಗೊಂಡ ನಂತರ ದೀರ್ಘಾವಧಿಯ ಪ್ರಯೋಜನಗಳನ್ನು ಮತ್ತು ನಿರಂತರ ಆವಿಷ್ಕಾರವನ್ನು ಇದು ಖಾತ್ರಿಪಡಿಸುತ್ತದೆ. ಈ ಉಪಕ್ರಮವು 5G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಭಾರತದ ಪ್ರಯಾಣದಲ್ಲಿ ನಿರ್ಣಾಯಕ ಹೆಜ್ಜೆಯನ್ನು ಗುರುತಿಸುತ್ತದೆ, ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅವಕಾಶ ಮಾಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಕಮಾಂಡರ್ (ಡಾ) ಅನಿಲ್ ರಾಣಾ, ” ಭಾರತ ಸರಕಾರದ ದೂರಸಂಪರ್ಕ ಇಲಾಖೆಯಿಂದ ‘100 5G ಲ್ಯಾಬ್ಸ್ ಇನಿಶಿಯೇಟಿವ್’ ಗೆ ಆಯ್ಕೆಯಾಗಲು ನಮಗೆ ಅಪಾರ ಹೆಮ್ಮೆ ಇದೆ. ಇದು ಎಂ ಐ ಟಿ ಮಣಿಪಾಲಕ್ಕೆ ಒಂದು ಅವಿಸ್ಮರನೀಯ ಕ್ಷಣವಾಗಿದೆ ಮತ್ತು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ. 5G ಲ್ಯಾಬ್ ಸ್ಥಾಪನೆಯೊಂದಿಗೆ, ನಾವು ಭಾರತದ ಡಿಜಿಟಲ್ ರೂಪಾಂತರದಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧರಾಗಿದ್ದೇವೆ, ದೂರಸಂಪರ್ಕ ಮತ್ತು ಅದರಾಚೆಗಿನ ಪ್ರಗತಿಗೆ ದಾರಿ ಮಾಡಿಕೊಡುತ್ತೇವೆ’ ಎಂದರು.

ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು, ಈ ಮನ್ನಣೆ ದೊರಕಲು ಕೆಲಸ ಮಾಡಿದ ಇಡೀ ಎಂ ಐ ಟಿ ಸಮುದಾಯಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸದರು , ಈ ಪ್ರಶಸ್ತಿಯು ಸಂಸ್ಥೆಯ ಶ್ರೇಷ್ಠತೆ ಮತ್ತು ನಾವೀನ್ಯತೆಯ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

 
 
 
 
 
 
 
 
 
 
 

Leave a Reply