ಸುಬ್ರಾಯ ಮತ್ತಿಹಳ್ಳಿ ಇವರಿಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ- 2023

ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ- 2023-ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ*

ಪುರಸ್ಕೃತರು : ಸುಬ್ರಾಯ ಮತ್ತಿಹಳ್ಳಿ
(ವಿಮರ್ಶನ ಸಾಹಿತ್ಯ)

ಸುಬ್ರಾಯ ಮತ್ತೀಹಳ್ಳಿ ಎಂಬ ಕಾವ್ಯ ನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಬಿ.ಸುಬ್ರಾಯ ಹೆಗಡೆ ವೃತ್ತಿಯಾಗಿ ಕೃಷಿ ಯನ್ನು ಒಪ್ಪಿಕೊಂಡಿದ್ದರೂ ಪ್ರವೃತ್ತಿಯಾಗಿ ಸಾಹಿತ್ಯವನ್ನು ಅಪ್ಪಿ ಕೊಂಡವರು. ಸರಳ ಸೀದಾ ನಡೆನುಡಿ, ಮೃದು ಮಧುರ ಮಾತು, ಪ್ರಸನ್ನ ಮೊಗ ,‌ ನಿರಾಡಂಬರ ಬದುಕು ಇವರ ಆಸ್ತಿ.

ದ್ರೌಪದಿ ಬಿಚ್ಚಿದ ತುರುಬುಗಳು( ಕವನ ಸಂಕಲನ), ಮಣ್ಣ ಗೋರಿಯ ಮೇಲೆ( ಅಂಕಣ ಬರಹಗಳು) ಎಸ್ ಎಲ್ ಭೈರಪ್ಪನವರ ಸಾರ್ಥ ಕಾದಂಬರಿ ಯನ್ನು ಹವಿ ಗನ್ನಡಕ್ಕೆ ಅನುವಾದ, ಇವೆಲ್ಲವೂ ಅವರ ಸಾಹಿತ್ಯಾಸಕ್ತಿಯ ತೋಟದಲ್ಲಿ ಅರಳಿದ ಕೃತಿ ಕುಸುಮಗಳು. ಸುಮ ಸಂಪದ ಎಂಬ ಕೃತಿ( ಅಂಕಣ ಬರಹಗಳು) ಹಾಗು ರತ್ನ ಗರ್ಭಾ ವಸುಂಧರಾ ಮತ್ತು ಗವಿ‌ ಮತ್ತು ಭವಿ ಎಂಬ ಎರಡು ನಾಟಕ ಕೃತಿಗಳು ಈಗಾಗಲೇ ಪೂರ್ತಿಗೊಂಡು ಪ್ರಕಟಣೆಯ ಹಂತದಲ್ಲಿವೆ.

ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ,ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಕಾವ್ಯ ಮಂಡನೆಯೊಂದಿಗೆ ಕಾರವಾರ ಮತ್ತು ಧಾರವಾಡ ಆಕಾಶವಾಣಿಗಳಲ್ಲಿ ಕಾವ್ಯ ಚಿಂತನ ಮತ್ತು ಭಾಷಣಗಳ ಪ್ರಸ್ತುತಿ ನಡೆಸಿಕೊಟ್ಟಿರುವ ಇವರು ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಪುಸ್ತಕ ಮಸ್ತಕ ಕಾರ್ಯಕ್ರಮಗಳನ್ನು ಸಂಘಟಿಸಿ, ಶ್ರೇಷ್ಠ ಕನ್ನಡ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅವರ ಸಾಹಿತ್ಯಾಸಕ್ತಿಗೆ ನೀರೆರೆದು ಪೋಷಿಸಿ ಕಲೆ ಸಾಹಿತ್ಯ ಸಂಸ್ಕ್ರತಿಯ ಸವಿ ರುಚಿ ಉಣಬಡಿಸಿದವರು ಇವರು.

ಹತ್ತು ಹಲವು ಕವಿಗೋಷ್ಟಿಗಳಲ್ಲಿ ಭಾಗವಹಿಸುವುದರೊಂದಿಗೆ  ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಕಾವ್ಯ ಪ್ರಸ್ತುತಿ ‌ನಡೆಸಿಕೊಟ್ಟವರು .

*2009-2011 ರ ಸಾಲಿನಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಾಲಾ ಪುಸ್ತಕ ಆಯ್ಕೆ ಸಮಿತಿಯಲ್ಲಿ ಸದಸ್ಯನಾಗಿ ಸೇವೆ* ಸಲ್ಲಿಸಿದ ಇವರು ಧಾರವಾಡ, ಶಿವಮೊಗ್ಗ, ಪುತ್ತೂರು, ರಾಯಚೂರು , ಕಾರ್ಕಳ, ಶೃಂಗೇರಿ ಗಳಲ್ಲಿ ಸಾಹಿತ್ಯೋಪನ್ಯಾಸ ನಡೆಸಿಕೊಟ್ಟು ಸಾಹಿತ್ಯಾಭಿಮಾನಿಗಳ ಮನಗೆದ್ದವರು. ಉತ್ತರ ಕನ್ನಡ ಜಿಲ್ಲೆಯ ಏಕೈಕ ಸಾಹಿತ್ಯಿಕ ಸಾಂಸ್ಕೃತಿಕ ಪತ್ರಿಕೆ *ಉಳುಮೆ- ಮಾಸ ಪತ್ರಿಕೆಯ ನಿರ್ವಾಹಕ ಸಂಪಾದಕನಾಗಿ* ಸೇವೆ ಸಲ್ಲಿಸುತ್ತಾ ಸ್ಮರಣ ಸಂಚಿಕೆಗಳ ಸಂಪಾದಕ್ವದಲ್ಲಿ ಹಾಗು ರಾಜ್ಯದ ಪತ್ರಿಕೆಗಳ ಲೇಖನ ವಿಮರ್ಶೆಗಳ ಪ್ರಕಟಣೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಬಂದಿರುವವರು‌ .

ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನೆಗೆ ಪಾತ್ರರಾಗಿ ಜನಮನ ಗೆದ್ದವರು.
ಇವರಿಗೆ *ಅಖಿಲ ಅಮೆರಿಕಾ ಹವ್ಯಕ ಸಂಘದ ಕಥಾ ಪುರಸ್ಕಾರ 2016* ಹಾಗು ಇವರ ಕವನ ಸಂಕಲನಕ್ಕೆ ಬಕುಳ ಪ್ರಶಸ್ತಿ 2013 ದೊರೆತಿದ್ದು ಇವರು 2014 ರಲ್ಲಿ ಸಿದ್ಧಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಸಮ್ಮೇಳನದ ಯಶಸ್ಸಿಗೆ ಕಾರಣರಾದವರು. ಸಾಹಿತ್ಯ ಮಾತ್ರವಲ್ಲದೆ ಸಮಾಜ ಮುಖಿ ಸೇವೆಯಲ್ಲೂ ಗುರುತಿಸಿಕೊಂಡಿರುವ ಇವರು ರೋಟರಿ‌ ಸಮುದಾಯ ದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಸಮಿತಿಯ ನಿರ್ಣಾಯಕನಾಗಿ ಕಾರ್ಯನಿರ್ವಹಿಸಿದ ಇವರು *ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶಕರಾಗಿ ಗುರುತಿಸಿಕೊಂಡವರು.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶದ ಸಿದ್ದಾಪುರ ತಾಲೂಕಿನ ಮತ್ತೀಹಳ್ಳಿ ಎಂಬ ಪುಟ್ಟಗ್ರಾಮದಲ್ಲಿ ಅಡಿಕೆ ತೋಟಗಾರ ನಾಗಿ ವೃತ್ತಿ ಜೀವನದಲ್ಲಿ ವ್ಯಸ್ತರಾದವರು .

ಇಬ್ಬರು ಸಹೋದರರು ಹಾಗು ನಾಲ್ವರು ಸಹೋದರಿಯರಿರುವ ಅವಿಭಕ್ತ ಕುಟುಂಬದ ಹಿರಿಯಣ್ಣನಾಗಿ *ಮನಮೆಚ್ಚಿದ ಮಡದಿ ಸವಿತಾ ಹೆಗಡೆ* ಅಕ್ಕರೆಯ ಪುತ್ರಿಯರಾದ *ಅಮೃತಾ, ಅನನ್ಯಾರವರೊಂದಿಗೆ ತುಂಬು ಸಂಸಾರ* ನಡೆಸುತ್ತಾ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಯುತ ಸುಬ್ರಾಯ ಮತ್ತೀಹಳ್ಳಿ ಅವರಿಗೆ *ಸಂಸ್ಕ್ರತಿ ವಿಶ್ವ ಪ್ರತಿಷ್ಟಾನ ಹಾಗು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆ ಜಂಟಿಯಾಗಿ ನವೆಂಬರ್ ಒಂದರಂದು ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ -2023 ನೀಡಿ ಅಭಿನಂದಲಿಸಿದ್ದೇವೆ*.

*✍️ಪೂರ್ಣಿಮಾ ಜನಾರ್ದನ್ ಕೊಡವೂರು*
ಸಂಚಾಲಕರು,ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿ*

 
 
 
 
 
 
 
 
 
 
 

Leave a Reply