ಅಯೋಧ್ಯೆಗೆ ಹೊರಟ ಕಾಣಿಯೂರು ಶ್ರೀ ವಿದ್ಯಾವಲ್ಲಭ ಶ್ರೀಪಾದರು

ಉಡುಪಿ:  ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶ್ರೀ ವಿದ್ಯಾ ವಲ್ಲಭ ತೀರ್ಥರು ಅಷ್ಟಮಠಾಧೀಶರಿಗೆ ಅಯೋಧ್ಯ ರಾಮ ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನ ನೀಡಲಾಗಿತ್ತು, ಆಹ್ವಾನದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳುತ್ತಿರುವ ಕಾಣಿಯೂರು ಶ್ರೀಗಳು.

ಕಾಣಿಯೂರು ಶ್ರೀಮಾತು : ಅಯೋಧ್ಯೆಗೆ ಆಹ್ವಾನ ಬಂದಿರುವುದು ನನಗೆ ಖುಷಿ ತಂದಿದೆ ಹಾಗೂ ನಾನು ಈಗಲೇ ಅಯೋಧ್ಯೆಗೆ ಹೊರಟಿದ್ದೇನೆ,ಆಹ್ವಾನದ ಬಗ್ಗೆ ಮೊದಲು ಗೊಂದಲ ಇತ್ತು , ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ ಆದರೆ ಈಗ ಟ್ರಸ್ಟ್ ನಿಂದ ಆಹ್ವಾನ ಬಂದ ಬಳಿಕ ಖಚಿತಗೊಂಡಿತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕು ಎಂಬ ಬಯಕೆ ಇತ್ತು.ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ.

ಟೆಂಟ್ ನ ಒಳಗೆ ರಾಮನ ವಿಗ್ರಹ ಪ್ರತಿಷ್ಠೆ ಮಾಡಿದವರೇ ಪೇಜಾವರ ಶ್ರೀಗಳು ಅನೇಕರ ಪ್ರಯತ್ನದಿಂದ ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ ಈಗ ಮೋದಿಜಿ ಅವರ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ರಾಮನ ಪ್ರತಿಮೆ ಮುಖ ಬಹಳ ಸುಂದರವಾಗಿದೆ ಮತ್ತು ಮಂದಸ್ಮಿತ ದೇಹ ಲಕ್ಷಣಗಳು ಆಕರ್ಷಕವಾಗಿದೆ ಹಾಗೂ ರಾಮ ದೇವರನ್ನೇ ಕಣ್ಣಾರೆ ನೋಡಿದಂತಾ ಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾಧ್ಯಮದರ ಜೊತೆಗೆ ಮಾತನಾಡಿದ ಶ್ರೀಗಳು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮನ ಪ್ರತಿಮೆ ಕರ್ನಾಟಕದಲ್ಲಿ ಆಗಿದ್ದು ಅನ್ನೋದು ಸಂತೋಷದ ವಿಚಾರ ಇನ್ನು ಮುಂದೆ ಅಲ್ಲಿ ಶಾಶ್ವತವಾಗಿ ಆ ಪ್ರತಿಮೆ ಇರಲಿದೆ ನಮ್ಮ ರಾಜ್ಯದ ಶಿಲ್ಪಿ ಕೆತ್ತಿರುವ ಪ್ರತಿಮೆ ಸುಂದರವಾಗಿ ಮೂಡಿಬಂದಿದೆ ಅಯೋಧ್ಯೆಗೆ ಹೋದಾಗಲೆಲ್ಲ ಇದನ್ನು ನಾವು ನೆನಪು ಮಾಡಿಕೊಳ್ಳಬಹುದು ಎಂದರು.

ಆಹ್ವಾನ ಇದ್ದು ಹೋಗದವರ ಬಗ್ಗೆ ನೋ ಕಮೆಂಟ್ಸ್ ಎಂದು ಹೇಳಿದ ಶ್ರೀಗಳು ಅವರಿಗೆ ದೇವರೇ ಬುದ್ದಿ ಕೊಡಬೇಕು ದೇವರೇ ಅವರನ್ನು ಕರೆಸಿಕೊಳ್ಳುತ್ತಾರೆ ಅಷ್ಟೇ ಹೇಳಬಹುದು ರಾಮದೇವರು ಯಾರಿಗೂ ಕನಸಲ್ಲಿ ಬಂದು ಬರಬೇಡ ಎಂದು ಹೇಳಿರುವುದಿಲ್ಲ ಅದೆಲ್ಲ ಕೇವಲ ಅವರವರ ಕಲ್ಪನೆ ಮೂರ್ತಿ ರಾಮನಂತಿಲ್ಲ ದಿಗ್ವಿಜಯ ಸಿಂಗ್ ಹೇಳಿಕೆ ವಿಚಾರ ಹಾಗಾದ್ರೆ ದಿಗ್ವಿಜಯ ಸಿಂಗ್ ರಾಮನನ್ನು ನೋಡಿದ್ದಾರಾ? ನೋಡಿದ್ದರೆ ಹೇಳಲಿ ರಾಮ ಹೇಗಿದ್ದ ಎಂದ  ಬೇಕಾದರೆ ಅದೇ ತರ ಮಾಡೋಣ ಹಿಂದುಗಳು ಒಗ್ಗಟ್ಟಾಗುತ್ತಿದ್ದಾರೆ, ಅದನ್ನು ಸಹಿಸಲು ಆಗುತ್ತಿಲ್ಲ ಹಿಂದು ವೋಟು ಬ್ಯಾಂಕ್ ಬಗ್ಗೆ ಆತಂಕ ಅವರಲ್ಲಿ ಸೃಷ್ಟಿಯಾಗುತ್ತಿದೆ ಹಾಗೂ ರಾಮನ ಬೊಂಬೆ ಇಟ್ಟರು ಎಂದು ಯಾರೋ ಹೇಳಿಕೆ ನೀಡಿದ್ದಾರೆ ಇವೆಲ್ಲ ನಿರಾಶೆಯ ಪ್ರತೀಕಗಳು ಅಷ್ಟೇ

ಎಲ್ಲರಿಗೂ ಒಳಗಿನಿಂದ ರಾಮನ ಬಗ್ಗೆ ಭಕ್ತಿ ಇರುತ್ತದೆ ಆದರೆ ಬೇರೊಂದು ಪಕ್ಷದ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ನಿರಾಸೆ ಇರಬಹುದು ಇದಕ್ಕೆಲ್ಲ ತಲೆ ಕೆಡಿಸಬೇಕಾಗಿಲ್ಲ ಎಂದು ಮಾಧ್ಯಮದವರಿಗೆ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply