ಶ್ರೀಕೃಷ್ಣ ಮಠದಲ್ಲಿ ಜ್ಞಾನಯಜ್ಞಕ್ಕೆ ಚಾಲನೆ 

ಶ್ರೀಕೃಷ್ಣ ​ಮಠ, ಪರ್ಯಾಯ ಅದಮಾರು ಮಠ   ಶ್ರೀಕೃಷ್ಣ ಜಯಂತಿಯ ​ಪ್ರಯುಕ್ತ ಎಂಟು ದಿನಗಳ ಕಾಲ ನಡೆಯುವ  ಜ್ಞಾನಯಜ್ಞ ಕ್ಕೆ ಶ್ರೀಪಾದರು​ಗಳು  ಸೇರಿ ದೀಪ​ ​ಬೆಳಗುವ ಮೂಲಕ ಜ್ಞಾನಕಾರ್ಯಕ್ಕೆ ಚಾಲನೆ ನೀಡಿದರು. ಪರ್ಯಾಯ ​ಶ್ರೀ ​ಈಶಪ್ರಿಯ ತೀರ್ಥ ಶ್ರೀಪಾದರು ಭಗವಂತನಿಗೆ ಸಂಬಂಧಪಟ್ಟ ಇಡಿ ಜಗತ್ತಿನಲ್ಲಿ ನಾವೇನನ್ನು ಪಡೆದರೂ ಅದು ಅವನ ಕೃಪೆ ಎಂದು ತಿಳಿಯುವುದೆ ಅವನ ಪೂಜೆ ಎಂದು ತಿಳಿಸಿದರು.

ಪಲಿಮಾರು​ ​ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಕೃಷ್ಣನ ಕೌಟುಂಬಿಕ ಬದುಕಿನ ಚಿತ್ರಣವನ್ನು ನಮ್ಮ ಮುಂದಿಟ್ಟರು. ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ವಾಹನ, ಮನೆ, ಮನೆಗೆ ಬೇಕಾದ ಉಳಿದ ಎಲ್ಲ ಸಲಕರಣೆಗಳು, ಸೇವಕರು ಇವೆಲ್ಲ ಇದ್ದಾಗಲೆ ಕುಟುಂಬ ಪರಿಪೂರ್ಣ ಗೊಳ್ಳುತ್ತದೆ. ಭಗವಂತನ ಕುಟುಂಬವೂ ಕೂಡ ಇದೆಲ್ಲವನ್ನೂ ಹೊಂದಿದೆ ಎನ್ನುವುದನ್ನು ಶ್ರೀರಾಜರಾಜೇಶ್ವರ ಯತಿಗಳು ತಮ್ಮ ಮಂಗಲಾ ಷ್ಟಕ ಪದ್ಯದಲ್ಲಿ ಹೇಳಿದ್ದನ್ನು ಸುಂದರವಾಗಿ ವಿವರಿಸಿದರು.

ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಭಾಗವತದ ಕೃಷ್ಣನ ಪರಿಚಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ದೇವರ ಇರವಿನ ಅರಿವಿಗೆ ಬಿದ್ದ ತೆರೆಯನ್ನು ಸ್ಮರಿಸುವುದೇ ಜನ್ಮ. ಅದು ಗುರುಗಳಿಂದ ಸಾಧ್ಯ. ಅದಕ್ಕಾಗಿ ಅಧ್ಯಯನ. ದ್ರೋಹ ಎಸಗಿದವನು ತೆರೆಯ ಮರೆಗೆ ಸರಿಯುತ್ತಾನೆ. ನಮ್ಮನ್ನು ಮುನ್ನೆಲೆಗೆ ತಂದು ಮನ್ನಣೆ ನೀಡುವ ಕೃಷ್ಣನ ಜನ್ಮ ನಮಗಾಗಲಿ ಎಂದು ಹರಸಿದರು.
 
 
 
 
 
 
 
 
 
 
 

Leave a Reply